ಬೆಂಗಳೂರು: ಬೇಲೆಕೇರಿ ಬಂದರಿನ ಮೂಲಕ ಕಬ್ಬಿಣದ ಅದಿರು ಕಳ್ಳಸಾಗಣೆ ಮಾಡಿದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕಂಪ್ಲಿ ಶಾಸಕ ಟಿ.ಎಚ್.ಸುರೇಶ್ ಬಾಬು, ಐಎಲ್ಸಿ ಇಂಡಸ್ಟ್ರೀಸ್ ಮಾಲೀಕ ಕೆ.ಸೋಮಶೇಖರ್, ಹೊಸಪೇಟೆಯ ಕೆ.ಗೋವಿಂದರಾಜು ಮತ್ತು ಐ.ಎರ್ರಿಸ್ವಾಮಿಗೆ ಜಾಮೀನು ನೀಡಲು ಶನಿವಾರ ಸಿಬಿಐ ವಿಶೇಷ ನ್ಯಾಯಾಲಯ ನಿರಾಕರಿಸಿದೆ.

‘ನಾಲ್ಕೂ ಆರೋಪಿಗಳೂ ಗೊತ್ತಿದ್ದೇ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಅವರು ತಿಳಿಯದೇ ತಪ್ಪು ಮಾಡಿದ್ದಾರೆ ಎಂಬ ವಾದ ಒಪ್ಪಲು ಸಾಧ್ಯವಿಲ್ಲ. ಈ ಹಂತದಲ್ಲಿ ಆರೋಪಿಗಳಿಗೆ ಜಾಮೀನು ನೀಡಲಾಗದು’ ಎಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರವಿ.ಎಂ.ನಾಯಕ್ ಆದೇಶಿಸಿದ್ದಾರೆ.

ಬೇಲೆಕೇರಿ ಹಗರಣಕ್ಕೆ ಸಂಬಂಧಿಸಿದ 2 ಪ್ರಕರಣಗಳಲ್ಲಿ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್, ಸಂಬಂಧಿ ಪ್ರಕಾಶ್ ಹೆಗಡೆ, ಹೊಸಪೇಟೆಯ ಕೆ.ಜನಾರ್ದನ ರೆಡ್ಡಿ ಮತ್ತು ಐ.ಎರ್ರಿಸ್ವಾಮಿಗೆ ಜಾಮೀನು ನಿರಾಕರಿಸಿ ಸಿಬಿಐ ವಿಶೇಷ ಕೋರ್ಟ್ ಗುರುವಾರ ಹಾಗೂ ಶುಕ್ರವಾರ ಎರಡು ಪ್ರತ್ಯೇಕ ಆದೇಶ ಹೊರಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.