ನ್ಯೂಯಾರ್ಕ್: 2011ರ ಸೆಪ್ಟೆಂಬರ್ 11ರಂದು ಇಲ್ಲಿನ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಗೋಪುರ ಧ್ವಂಸ ಪ್ರಕರಣ ಸಂಬಂಧ ಅಮೆರಿಕನ್ ಏರ್ಲೈನ್ಸ್ ಹಾಗೂ ಯುನೈಟೆಡ್ ಏರ್ಲೈನ್ಸ್ ಸಂಸ್ಥೆಗಳು ₹617 ಕೋಟಿ (95 ಮಿಲಿಯನ್ ಯುಎಸ್ಡಿ) ಪಾವತಿಸುವ ಒಪ್ಪಂದಕ್ಕೆ ಬಂದಿದೆ. 13 ವರ್ಷಗಳ ಬಳಿಕ ಈ ವ್ಯಾಜ್ಯ ಕೊನೆ ಹಂತಕ್ಕೆ ಬಂದಿದೆ.

ಪೋರ್ಟ್ ಅಥಾರಿಟಿ ಒಡೆತನದ ವಿಶ್ವ ವಾಣಿಜ್ಯ ಕೇಂದ್ರವನ್ನು ಲ್ಯಾರಿ ಸಿಲ್ವರ್ಸ್ಟೇನ್ ಎಂಬ ಡೆವಲಪರ್ 99 ವರ್ಷಗಳ ಭೋಗ್ಯಕ್ಕೆ ಪಡೆದ ಆರು ವಾರಗಳ ಬಳಿಕ ಈ ದುರ್ಘಟನೆ ನಡೆದಿತ್ತು. ವರ್ಷಗಳ ಕಾಲ ನಡೆದ ಮಾತುಕತೆ ಬಳಿಕ ಲ್ಯಾರಿ ಅವರಿಗೆ ವೈಯಕ್ತಿಕ ವಿಮೆಯಿಂದ ₹26 ಸಾವಿರ ಕೋಟಿ (4.5 ಬಿಲಿಯನ್ ಯುಎಸ್ಡಿ) ಸಂದಾಯವಾಗಿತ್ತು.

ವಿಶ್ವ ವಾಣಿಜ್ಯ ಕೇಂದ್ರದ ಡೆವಲಪರ್ ಲ್ಯಾರಿ ಅವರಿಗೆ ವಿಮಾನಯಾನ ಸಂಸ್ಥೆಗಳ ಪರ ವಿಮಾ ಕಂಪೆನಿಗಳು ಪರಿಹಾರ ಪಾವತಿಸಲಿವೆ ಎಂದು ನ್ಯಾಯಾಲಯದ ಕಡತಗಳಲ್ಲಿ ಉಲ್ಲೇಖಿಸಲಾಗಿದೆ.

ಕಟ್ಟಡ ಧ್ವಂಸಕ್ಕೆ ಎರಡೂ ಕಂಪೆನಿಗಳ ವಿಮಾನಗಳನ್ನು ಉಗ್ರರು ಬಳಸಿದ್ದರು. ಘಟನೆಯಲ್ಲಿ 2700ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.