ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್ ಬಳಿಯ ಆಡಿಸನ್ ವಿಮಾನ ನಿಲ್ದಾಣದಲ್ಲಿಭಾನುವಾರ ಎರಡು ಎಂಜಿನ್‌ಗಳ ಲಘು ವಿಮಾನವೊಂದು ಪತನಗೊಂಡಿದ್ದು, 10 ಮಂದಿ ದುರ್ಮರಣಕ್ಕೀಡಾಗಿದ್ದಾರೆ.

‘ವಿಮಾನದಲ್ಲಿದ್ದ ಯಾರೂ ಬದುಕುಳಿದಿಲ್ಲ. ಎಲ್ಲ ಹತ್ತು ಮಂದಿಯೂ ಸಾವಿಗೀಡಾಗಿದ್ದಾರೆ ಎಂದು ದಲ್ಲಾಸ್ ಕೌಂಟಿ ವೈದ್ಯಕೀಯ ಪರೀಕ್ಷಕರು ತಿಳಿಸಿದ್ದಾರೆ,’ಎಂದು ಟೆಕ್ಸಾಸ್‌ನ ಸ್ಥಳೀಯಾಡಳಿತ ಘೋಷಿಸಿದೆ.

‘ಕಿಂಗ್ ಏರ್ 350’ ಹೆಸರಿನವಿಮಾನದ ಪತನದಸ್ಥಳಕ್ಕೆ ರಾಷ್ಟ್ರೀಯ ಸಾರಿಗೆ ಸುರಕ್ಷಾ ಮಂಡಳಿಯೂ ತಜ್ಞರ ತಂಡವನ್ನು ರವಾನಿಸಿದ್ದು, ಪ್ರಕರಣದ ತನಿಖೆ ನಡೆಸುವಂತೆ ತಿಳಿಸಿದೆ. ವಿಮಾನ ಅಪಘಾತಕ್ಕೆ ನಿಖರ ಕಾರಣವೇನೆಂದು ಸದ್ಯ ಇನ್ನೂ ಗೊತ್ತಾಗಿಲ್ಲ.

ಇದು ಖಾಸಗಿ ವಿಮಾನವಾಗಿದ್ದು, ಹಾರಾಟ ಆರಂಭಿಸಿದ ಕೆಲವೇ ಹೊತ್ತಿನಲ್ಲೇ ಎಂಜಿನ್‌ನಲ್ಲಿನ ದೋಷದಿಂದ ಪತನವಾಗಿದೆ ಎಂದು ಅಲ್ಲಿನ ಸುದ್ದಿ ಸಂಸ್ಥೆ ಸಿಬಿಎಸ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.