ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಚುನಾವಣೆ: 120 ವರ್ಷಗಳಲ್ಲಿ ಅತಿ ಹೆಚ್ಚು ಮತದಾನ

1900ರಲ್ಲಿ ಶೇ 73.7ರಷ್ಟು ಮತದಾನವಾಗಿತ್ತು: ತಜ್ಞರ ಅಭಿಮತ
Last Updated 6 ನವೆಂಬರ್ 2020, 6:13 IST
ಅಕ್ಷರ ಗಾತ್ರ

ವಾಷಿಂಗ್ಟನ್‌: 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯು 120 ವರ್ಷಗಳಲ್ಲೇ ಅತಿ ಹೆಚ್ಚು ಮತದಾನವಾದ ಚುನಾವಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಚುನಾವಣಾ ತಜ್ಞರು ಹೇಳಿದ್ದಾರೆ.

ಅಮೆರಿಕದ ಈ ಚುನಾವಣೆಯಲ್ಲಿ ಪ್ರಾಥಮಿಕವಾಗಿ ಅಂದಾಜಿಸಿದ ಪ್ರಕಾರ ಈ ವರ್ಷ 23.9 ಕೋಟಿ ಮತದಾರರು ಮತದಾನದ ಅರ್ಹತೆ ಪಡೆದಿದ್ದರು. ಅದರಲ್ಲಿ 16 ಕೋಟಿ ಜನರು ಮತ ಚಲಾಯಿಸಿದ್ದಾರೆ. ಈ ಕುರಿತು ಸ್ಪಷ್ಟ ಅಂಕಿ ಅಂಶ ಕೆಲ ದಿನಗಳಲ್ಲಿ ತಿಳಿಯಲಿದೆ.

ನವೆಂಬರ್ 3ರಂದು ನಡೆದ ಈ ಚುನಾವಣೆಯಲ್ಲಿ ಶೇ 66.9ರಷ್ಟು ಮತದಾನವಾಗಿದೆ. ಇದು 1900ನೇ ಇಸವಿಯ ನಂತರ ಅತಿ ಹೆಚ್ಚು ಮತದಾನವಾದ ಚುನಾವಣೆಯಾಗಿದೆ. 1900ನೇ ಸಾಲಿನ ಚುನಾವಣೆಯಲ್ಲಿ ಶೇ 73.7ರಷ್ಟು ಮತದಾನವಾಗಿತ್ತು. 2008ರಲ್ಲಿ ಶೇ 58 ಮತ್ತು 2016ರಲ್ಲಿ ಶೇ 56 ರಷ್ಟು ಮತದಾನವಾಗಿತ್ತು.

‘120 ವರ್ಷಗಳಲ್ಲೇ 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅತಿ ಹೆಚ್ಚು ಮತದಾನವಾಗಿದೆ. ಇನ್ನೂ ಮತ ಎಣಿಕೆ ಕಾರ್ಯ ಮುಂದುವರಿದಿದೆ‘ ಎಂದು ಫ್ಲಾರಿಡಾ ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಮೈಖೆಲ್ ಪಿ ಮೆಕ್‌ಡೊನಾಲ್ಡ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT