ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೆರಿಕ | ನಾಲ್ವರ ಹತ್ಯೆಗೈದ ಅಪರಾಧಿಗೆ 240 ವರ್ಷಗಳ ಕಠಿಣ ಸಜೆ

Published 29 ಏಪ್ರಿಲ್ 2023, 2:27 IST
Last Updated 29 ಏಪ್ರಿಲ್ 2023, 2:27 IST
ಅಕ್ಷರ ಗಾತ್ರ

ಇಂಡಿಯಾನಪೊಲಿಸ್‌ : ಅಮೆರಿಕದ ಇಂಡಿಯಾನಪೊಲಿಸ್‌ನಲ್ಲಿ ನಡೆದ ಮೂವರು ಯುವಕರು ಮತ್ತು ಒಬ್ಬ ಯುವತಿಯ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪರಾಧಿಗೆ ನ್ಯಾಯಾಲಯವು 240 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. 

ಲಸಿಯಾನ್ ವಾಟ್ಕಿನ್ಸ್‌ ಕಠಿಣ ಶಿಕ್ಷೆಗೊಳಗಾದ ಅಪರಾಧಿ. 2020ರಲ್ಲಿ ಲಸಿಯಾನ್ ವಾಟ್ಕಿನ್ ಮತ್ತು ಆತನ ಸ್ನೇಹಿತರು ಸೇರಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಯುವಕರಾದ ಮಾರ್ಸೆಲ್ ವಿಲ್ಸ್ (20), ಬ್ರಾಕ್ಸ್ಟನ್ ಫೋರ್ಡ್(21), ಜಲೆನ್ ರಾಬರ್ಟ್ಸ್ (19)  ಮತ್ತು ಯುವತಿ ಕಿಮಾರಿ ಹಂಟ್ (21) ಅವರನ್ನು ಭೀಕರವಾಗಿ ಹತ್ಯೆ ಮಾಡಿದ್ದರು.

‘2020ರಲ್ಲಿ ಅಮೆರಿಕದ ಇಂಡಿಯಾನಪೊಲಿಸ್‌ನ ಅಪಾರ್ಟ್‌ಮೆಂಟ್‌ವೊಂದರಲ್ಲಿ ದರೋಡೆ ನಡೆದಿತ್ತು. ಈ ದರೋಡೆ ನಡೆದ ಸ್ಥಳದಲ್ಲಿ ನಾಲ್ಕು ಮೃತದೇಹಗಳು ಪತ್ತೆಯಾಗಿತ್ತು. ಈ ಹತ್ಯೆ ಕಂಡು ನಾವು ಆಘಾತಕ್ಕೊಳಗಾಗಿದ್ದೇವು‘ ಎಂದು ಮರಿಯನ್ ಕೌಂಟಿ ಪ್ರಾಸಿಕ್ಯೂಟರ್ ರಿಯಾನ್ ಮಿಯರ್ಸ್ ತಿಳಿಸಿದ್ದಾರೆ.

ವಾಟ್ಕಿನ್ಸ್‌ ಜೊತೆಗೆ ಕ್ಯಾಮರೂನ್ ಬ್ಯಾಂಕ್ಸ್ ಮತ್ತು ಡೆಸ್ಮಂಡ್ ಬ್ಯಾಂಕ್ಸ್ ಅಪರಾಧಿಗಳೆಂದು ಸಾಬೀತಾಗಿದ್ದು, ಕ್ಯಾಮರೂನ್ ಬ್ಯಾಂಕ್ಸ್ ಮತ್ತು ಡೆಸ್ಮಂಡ್ ಬ್ಯಾಂಕ್ಸ್ ಅವರಿಗೆ ಕ್ರಮವಾಗಿ 220 ವರ್ಷಗಳ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ. ನಾಲ್ಕನೇ ಅಪರಾಧಿ ರೋಡ್ರಿಯನ್ಸ್ ಆಂಡರ್ಸನ್‌ಗೆ 35 ವರ್ಷಗಳ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ.

ಕ್ಯಾಮರೂನ್ ಬ್ಯಾಂಕ್ಸ್ ಮತ್ತು ಡೆಸ್ಮಂಡ್ ಬ್ಯಾಂಕ್ಸ್  ಸಹೋದರರಾಗಿದ್ದಾರೆ. ಲಸಿಯಾನ್ ವಾಟ್ಕಿನ್ಸ್‌ ಜೊತೆ ಸೇರಿ ಅಪಾರ್ಟ್‌ಮೆಂಟ್‌ನಲ್ಲಿ ದರೋಡೆ ಮಾಡಿದ್ದರು. ಈ ವೇಳೆ ಅಪಾರ್ಟ್‌ಮೆಂಟ್‌ನಲ್ಲಿದ್ದ ನಾಲ್ಕು ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಸುಮಾರು 50 ಬಾರಿ ಗುಂಡು ಹಾರಿಸಿದ್ದರು ಎಂದು ಪೊಲೀಸ್‌ ವರದಿ ತಿಳಿಸಿದೆ. ಗುಂಡಿನ ದಾಳಿ ನಡೆಸಿದ ನಂತರ ಸ್ಥಳವನ್ನು ಸ್ವಚ್ಛಗೊಳಿಸಿ ಪರಾರಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT