ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗಪುರ: ಸಂಸತ್‌ ನಾಮನಿರ್ದೇಶಿತ ಸದಸ್ಯರಲ್ಲಿ ಮೂವರು ಭಾರತೀಯರು

Published 17 ಜುಲೈ 2023, 16:35 IST
Last Updated 17 ಜುಲೈ 2023, 16:35 IST
ಅಕ್ಷರ ಗಾತ್ರ

ಸಿಂಗಪುರ: ಇಲ್ಲಿನ ಸಂಸತ್‌ಗೆ ನಾಮನಿರ್ದೇಶಿತ ಸದಸ್ಯರಾಗಿ (ಎನ್‌ಎಂಪಿ) ನೇಮಕಗೊಳ್ಳಲಿರುವ ಒಂಬತ್ತು ಮಂದಿಯಲ್ಲಿ ಮೂವರು ಸಿಂಗಪುರದಲ್ಲಿ ನೆಲೆಸಿರುವ ಭಾರತೀಯ ಸಂಜಾತರೂ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿಂಗಪುರ ಇಂಡಿಯನ್‌ ಛೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿಯ ಅಧ್ಯಕ್ಷ ನೀಲ್ ಪರೇಖ್ ನಿಮಿಲ್ ರಜನಿಕಾಂತ್, ಚಂದ್ರದಾಸ್‌ ಉಷಾ ರಾಣಿ, ಪ್ಲುರಲ್ ಆರ್ಟ್ ಮ್ಯಾಗಜಿನ್‌ನ ಸಹ-ಸಂಸ್ಥಾಪಕರು ಮತ್ತು ವಕೀಲರಾದ ರಾಜ್ ಜೋಶುವಾ ಥಾಮಸ್ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾಗಿರುವ ಭಾರತ ಸಂಜಾತರು.

ಸಿಂಗಪುರ ಸಂಸತ್‌ನ ವಿಶೇಷ ಆಯ್ಕೆ ಸಮಿತಿಯು ಒಟ್ಟು ಮೂವತ್ತು ಮಂದಿಯಲ್ಲಿ 9 ಜನರ ಹೆಸರನ್ನು ಅಂತಿಮಗೊಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸಿಂಗಪುರದ ಅಧ್ಯಕ್ಷೆ ಹಾಲಿಮಾ ಯಾಕೊಬ್‌ ಅವರು ಜುಲೈ 24ರಂದು ನಾಮನಿರ್ದೇಶಿತ ಸದಸ್ಯರನ್ನು ಎರಡೂವರೆ ವರ್ಷಗಳ ಅವಧಿಗೆ ನೇಮಕ ಮಾಡಲಿದ್ದಾರೆ ಮತ್ತು ಆಗಸ್ಟ್‌ನಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT