ಕಾಬೂಲ್: ಶಾಂತಿ ಒಪ್ಪಂದವು ತಾಲಿಬಾನ್ ನಡೆಯ ಮೇಲೆ ಆಧಾರವಾಗಿದೆ ಎಂದು ಅಮೆರಿಕ ಹೇಳಿದ ಬೆನ್ನಲ್ಲೇ, ಅಫ್ಗಾನ್ ಸೇನಾ ನೆಲೆಗಳ ಮೇಲೆ ತಾಲಿಬಾನ್ ಮಂಗಳವಾರ ದಾಳಿ ನಡೆಸಿದೆ. ಈ ನಡೆಯು ಒಪ್ಪಂದದ ಕುರಿತು ಅನುಮಾನ ಮೂಡಿಸಿದೆ.

‘ದೇಶದಲ್ಲಿರುವ 34 ಸೇನಾ ನೆಲೆಗಳಲ್ಲಿ 13 ನೆಲೆಗಳ ಮೇಲೆ ತಾಲಿಬಾನ್ ರಾತ್ರೋರಾತ್ರಿ ದಾಳಿ ಮಾಡಿದೆ. ಕಂದಹಾರ್ ಪ್ರಾಂತ್ಯದಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ’ ಎಂದು ಸರ್ಕಾರ ಹೇಳಿಕೆ ನೀಡಿದೆ.

ಇದನ್ನೂ ಓದಿ:ತಾಲಿಬಾನ್–ಅಮೆರಿಕಾ ಒಪ್ಪಂದದಲ್ಲಿ ಏನಿದೆ?

‘ಕಾಬೂಲ್ ಹತ್ತಿರದ ಲಾಗರ್ ಪ್ರಾಂತ್ಯದಲ್ಲಿ ನಡೆದ ದಾಳಿಯಲ್ಲಿ ಐವರು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಇದು ಸೇನಾ ಹೇಳಿಕೆಯಲ್ಲಿ ಸೇರಿಲ್ಲ’ ಎಂದು ಪ್ರಾಂತ್ಯಾಧಿಕಾರಿಯ ವಕ್ತಾರ ದಿದಾರ್ ಲವಾನ್ ಹೇಳಿದ್ದಾರೆ.

ಅಫ್ಗಾನಿಸ್ತಾನದ ಒಂದು ಸಾವಿರ ಸೈನಿಕರ ಬಿಡುಗಡೆ ಮತ್ತು ಜೈಲಿನಲ್ಲಿರುವ ಐದು ಸಾವಿರ ಉಗ್ರರ ಬಿಡುಗಡೆ; ಈ ಎರಡೂ ಅಂಶಗಳು ಒಪ್ಪಂದದಲ್ಲಿದ್ದವು. ಈ ಕೊಡುಕೊಳ್ಳುವಿಕೆಯು ಮಾತುಕತೆಗೂ ಮೊದಲೇ ತಾಲಿಬಾನ್ ಹೇಳಿತ್ತು. ಆದರೆ, ಇದನ್ನು ಅಧ್ಯಕ್ಷ ಅಶ್ರಫ್ ಗನಿ ಅವರು ಮಾತುಕತೆ ಪ್ರಾರಂಭಕ್ಕೂ ಮೊದಲು ನಿರಾಕರಿಸಿದ್ದರು. ಆದ್ದರಿಂದ ಕೈದಿಗಳ ಬಿಡುಗಡೆ ಕುರಿತು ವಿವಾದ ಸೃಷ್ಟಿಯಾಗಿದೆ. ಇದು ಶಾಂತಿ ಒಪ್ಪಂದದ ಮುಂದುವರಿಕೆ ಬಗ್ಗೆ ಅನಿಶ್ಚಿತತೆ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.