ದುಬೈ: ದುಬೈ ಅರಸರಿಗೆ ಸೇರಿದ ಅರಮನೆಯಲ್ಲಿ ಪ್ರತಿಭಟನೆ ನಡೆಸಲು ಯತ್ನಿಸಿದ 11 ರಾಜಕುಮಾರರನ್ನು ಬಂಧಿಸಲಾಗಿದೆ ಎಂದು ಸೌದಿ ನ್ಯೂಸ್ ವೆಬ್‌ಸೈಟ್ ವರದಿ ಮಾಡಿದೆ.

ಅನಾಮಿಕ ಅಧಿಕಾರಿಯೊಬ್ಬರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಅರಸರ ಕುಟುಂಬದವರ ರಕ್ಷಣೆಗಿರುವ ರಾಷ್ಟ್ರೀಯ ಭದ್ರತಾ ವಿಭಾಗವು ಪ್ರತಿಭಟನೆಯಲ್ಲಿ ನಿರತರಾಗಿದ್ದ ರಾಜಕುಮಾರರನ್ನು ಬಂಧಿಸಲು ಆದೇಶ ನೀಡಿತ್ತು ಎಂದು ವರದಿ ತಿಳಿಸಿದೆ.

ಬಂಧಿತರನ್ನು ರಾಜಧಾನಿ ರಿಯಾದ್‌ನ ದಕ್ಷಿಣ ಭಾಗದಲ್ಲಿರುವ ಗರಿಷ್ಠ ಭದ್ರತಾ ವ್ಯವಸ್ಥೆ ಇರುವ, ಸೌದಿ ಸುಪ್ತಚರ ಸೇವೆಗಳು ನಡೆಸುವ ಜೈಲಿನಲ್ಲಿ ಇರಿಸಲಾಗಿದೆ. ಇದೇ ಜೈಲಿನಲ್ಲಿ ಅಪರಾಧಿಗಳು, ಉಗ್ರರು, ಅಲ್–ಕೈದಾ ಭಯೋತ್ಪಾದಕರನ್ನು ಕೂಡಾ ಇರಿಸಲಾಗಿದೆ ಎಂದು ವರದಿಯಾಗಿದೆ.

ಸೋದರ ಸಂಬಂಧಿಯೊಬ್ಬರಿಗೆ ಪರಿಹಾರಧನ ನೀಡಬೇಕೆಂಬ ಬೇಡಿಕೆ ಮತ್ತು ಸಂಬಂಧಿಗಳ ನೀರು ಹಾಗೂ ವಿದ್ಯುತ್ ಬಿಲ್ ಪಾವತಿಯನ್ನು ಸ್ಥಗಿತಗೊಳಿಸಿರುವ ರಾಜನ ಕ್ರಮದ ವಿರುದ್ಧ ಈ ಪ್ರತಿಭಟನೆ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.