ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಢಾಕಾದ ಅಪಾರ್ಟ್‌ಮೆಂಟ್‌ ಕಟ್ಟಡಗಳಲ್ಲಿ ಬೆಂಕಿ: ಕನಿಷ್ಠ 69 ಮಂದಿ ಆಹುತಿ

ಬಾಂಗ್ಲಾದೇಶ
Last Updated 21 ಫೆಬ್ರುವರಿ 2019, 3:11 IST
ಅಕ್ಷರ ಗಾತ್ರ

ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿನ ಅಪಾರ್ಟ್‌ಮೆಂಟ್‌ ಕಟ್ಟಡಗಳಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ 69ಮಂದಿ ಸಾವಿಗೀಡಾಗಿದ್ದಾರೆ. ಬೆಂಕಿಗೆ ಬಹುಬೇಗ ಸ್ಪಂದಿಸುವಂತಹ ರಾಸಾಯನಿಕಗಳ ಸಂಗ್ರಹವನ್ನು ಹೊಂದಿದ್ದ ಕಟ್ಟಡಗಳಲ್ಲಿ ಇನ್ನೂ ಹಲವು ಮಂದಿ ಜೀವನ್ಮರಣ ಹೋರಾಟ ನಡೆಸಿದ್ದಾರೆ.

ಶವಗಳಿಗಾಗಿ ಹಾಗೂ ಕಟ್ಟಡದೊಳಗೆ ಸಿಲುಕಿರುವವರಿಗಾಗಿ ಇನ್ನೂ ಹುಡುಕಾಟ ನಡೆದಿದೆ. ಸಾವಿನ ಸಂಖ್ಯೆ ಏರಿಕೆಯಾಗಬಹುದು ಎಂದು ಬಾಂಗ್ಲಾ ಅಗ್ನಿಶಾಮಕ ಸೇವೆಗಳ ಮುಖ್ಯಸ್ಥ ಅಲಿ ಅಹ್ಮದ್‌ ಮಾಹಿತಿ ನೀಡಿದ್ದಾರೆ.

ರಾಸಾಯನಿಕಗಳನ್ನು ಸಂಗ್ರಹಿಸಿದ್ದ ಉಗ್ರಾಣವಾಗಿಯೂ ಇಲ್ಲಿನ ಕಟ್ಟಡಗಳನ್ನು ಬಳಸಲಾಗಿತ್ತು. ಬೆಂಕಿಗೆ ಬಹುಬೇಗ ಸ್ಪಂದಿಸುವ ರಾಸಾಯನಿಕಗಳು, ಬಾಡಿ ಸ್ಪ್ರೇ ಹಾಗೂ ಪ್ಲಾಸ್ಟಿಕ್‌ ತುಂಡುಗಳ ಸಂಗ್ರಹಗಳು ಹೊತ್ತಿ ಉರಿದಿರುವುದರಿಂದ ಬೆಂಕಿಯ ಬಹುಬೇಗ ಹಲವು ಕಟ್ಟಡಗಳನ್ನು ಆವರಿಸಿಕೊಂಡಿದೆ. ಢಾಕಾದ ಹಳೆಯ ಪ್ರದೇಶವಾಗಿರುವ ಚೌಕ್‌ಬಜಾರ್‌ನಲ್ಲಿ ಗ್ಯಾಸ್‌ ಸಿಲಿಂಡರ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿದ ಎನ್ನಲಾಗುತ್ತಿದೆ.

ಇಲ್ಲಿನ ಅಪಾರ್ಟ್‌ಮೆಂಟ್‌ನ ಸಮೀಪ ಸಾಗುತ್ತಿದ್ದವರು, ವಧುವಿನ ಸಮಾರಂಭದಲ್ಲಿದ್ದವರು ಹಾಗೂ ರೆಸ್ಟೊರೆಂಟ್‌ನಲ್ಲಿ ಆಹಾರ ಸೇವಿಸುತ್ತಿದ್ದವರೂ ಬೆಂಕಿಗೆ ಆಹುತಿಯಾಗಿದ್ದಾರೆ. ಬುಧವಾರ ರಾತ್ರಿ ಸುಮಾರು 10:40ಕ್ಕೆ ಕಾಣಿಸಿಕೊಂಡಿರುವ ಬೆಂಕಿ ಈ ವರೆಗೂ ಉರಿಯುತ್ತಲೇ ಇದೆ. ಬೆಂಕಿ ನಂದಿಸಲು 200ಕ್ಕೂ ಹೆಚ್ಚು ಅಗ್ನಿ ಶಾಮಕ ವಾಹನಗಳನ್ನು ಬಳಸಲಾಗಿದೆ.

ಗ್ಯಾಸ್‌ ಸಿಲಿಂಡರ್‌ನಿಂದ ಹರಡಿದ ಬೆಂಕಿ ಬಹುಬೇಗ ರಾಸಾಯನಿಕ ಉಗ್ರಾಣವನ್ನು ಮುಟ್ಟಿದೆ. ಅಲ್ಲಿಂದ ಧಗಧಗಿಸುವ ಜ್ವಾಲೆ

ಅಪಾರ್ಟ್‌ಮೆಂಟ್‌ನ 60ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಅತ್ಯಂತ ಕಡಿದಾದ ರಸ್ತೆಗಳು, ಒಂದಕ್ಕೊಂದು ಅಂಟಿದಂತಿರುವ ಕಟ್ಟಡಗಳು ಹಾಗೂ ಮಹಡಿಯಿಂದ ಇಳಿಯಲು ಕಿರುದಾದ ಮೆಟ್ಟಿಲುಗಳಿಂದಾಗಿ ಜನರು ಬೆಂಕಿಯಿಂದ ತಪ್ಪಿಸಿಕೊಳ್ಳಲಾಗದೆ ಸಿಲುಕಿದ್ದಾರೆ.

ಸಮೀಪದ ಸಮುದಾಯ ಕೇಂದ್ರದಲ್ಲಿ ವಧುವಿನ ಕಡೆಯವರು ನಡೆಸುತ್ತಿದ್ದ ಸಮಾರಂಭದವರೆಗೂ ಬೆಂಕಿ ವ್ಯಾಪಿಸಿದ್ದು, ಸಮಾರಂಭದಲ್ಲಿದ್ದ ಅನೇಕರು

ಗಾಯಗೊಂಡಿದ್ದಾರೆ. ಬೆಂಕಿ ಅವಘಡದಲ್ಲಿ ಕನಿಷ್ಠ ಎರಡು ಕಾರುಗಳು ಹಾಗೂ 10 ಸೈಕಲ್‌ ರಿಕ್ಷಾಗಳು ಸುಟ್ಟು ಹೋಗಿರುವುದಾಗಿ ಢಾಕಾದ ಡಿಸಿಪಿ ಇಬ್ರಾಹಿಮ್‌ ಖಾನ್‌ ತಿಳಿಸಿದ್ದಾರೆ.

ಅವಘಡದಲ್ಲಿ ಕನಿಷ್ಠ 45 ಮಂದಿ ಗಾಯಗೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಕಾಣೆಯಾಗಿರುವ ತನ್ನವರ ಹುಡುಕಾಟಕ್ಕಾಗಿ ನೂರಾರು ಮಂದಿ ಆಸ್ಪತ್ರೆಯಲ್ಲಿ ಪರದಾಡುತ್ತಿದ್ದಾರೆ. ಇನ್ನೂ ಅನೇಕರು ಬೆಂಕಿ ಆವರಿಸಿರುವ ಕಟ್ಟಡಗಳಲ್ಲಿಯೇ

ಸಿಲುಕಿದ್ದಾರೆ. ಜನ ವಸತಿ ಪ್ರದೇಶಗಳಲ್ಲಿ ರಾಸಾಯನಿಕಗಳ ಸಂಗ್ರಹವನ್ನು ತಪ್ಪಿಸಲು ಢಾಕಾ ನಗರಾಡಳಿತ ಹಿಂದೆ ಕ್ರಮವಹಿಸಿತ್ತಾದರೂ, ಇತ್ತೀಚಿನ ವರ್ಷಗಳಲ್ಲಿ ಉಗ್ರಾಣಗಳು ವಸತಿ ಪ್ರವೇಶಗಳಲ್ಲಿ ವ್ಯಾಪಿಸಿರುವುದಾಗಿ ಎಂದು ವರದಿಯಾಗಿದೆ.

2010ರಲ್ಲಿಯೂ ಹಳೆಯ ಢಾಕಾ ಪ್ರದೇಶದಲ್ಲಿನ ರಾಸಾಯನಿಕ ಉಗ್ರಾಣದಲ್ಲಿ ಬೆಂಕಿ ಅವಘಡ ಸಂಭವಿಸಿ 120ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT