ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತಿನ ನಿರಾಶ್ರಿತರ ಸಂಖ್ಯೆ 6.8 ಕೋಟಿ

Last Updated 24 ಜೂನ್ 2018, 18:19 IST
ಅಕ್ಷರ ಗಾತ್ರ

2017ರ ನವೆಂಬರ್‌ ವೇಳೆಗೆಜಗತ್ತಿನಾದ್ಯಂತ ನಿರಾಶ್ರಿತರ ಸಂಖ್ಯೆ6.8 ಕೋಟಿ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿ ವರದಿ ಮಾಡಿದೆ.ಅಥವಾ ಪ್ರತಿ ಎರಡು ಸೆಕೆಂಡ್‌ಗೆ ಒಬ್ಬ ವ್ಯಕ್ತಿ ನಿರಾಶ್ರಿತನಾಗುತ್ತಿದ್ದಾನೆ ಎಂದು ವರದಿ ಹೇಳಿದೆ.

ಟರ್ಕಿ: ಅತಿಹೆಚ್ಚು ನಿರಾಶ್ರಿತರಿಗೆ ಅಂದರೆ 35 ಲಕ್ಷ ಜನರಿಗೆ ಆಶ್ರಯ ನೀಡಿದೆ

ವಲಸೆಗೆ ಕಾರಣಗಳು:ಯುದ್ಧ, ಹಿಂಸೆ, ಕಿರುಕುಳ

ಮುಖ್ಯಾಂಶಗಳು:

ಕಳೆದ ವರ್ಷಕ್ಕೆ ಹೋಲಿಸಿದರೆ ವಲಸಿಗರ ಸಂಖ್ಯೆ 30 ಲಕ್ಷ ಹೆಚ್ಚಾಗಿದೆ

ನಿರಾಶ್ರಿತರ ಈಗಿನ ಸಂಖ್ಯೆ ಥಾಯ್ಲೆಂಡ್‌ನ ಒಟ್ಟು ಜನಸಂಖ್ಯೆಗೆ ಸಮ

ಪ್ರತೀ 110 ಜನರಲ್ಲಿ ಒಬ್ಬ ವ್ಯಕ್ತಿ ಒತ್ತಾಯಪೂರ್ವಕವಾಗಿ ಬೇರೆಡೆ ತೆರಳುತ್ತಿದ್ದಾನೆ.

ಈ ಎಲ್ಲ ಅಸಹಾಯಕರು ಕೇವಲ 10 ದೇಶಗಳಲ್ಲಿ ಹಂಚಿಹೋಗಿದ್ದಾರೆ

ಕಳೆದ ವರ್ಷವೊಂದರಲ್ಲೇ ಸೂರು ಕಳೆದುಕೊಂಡವರು 1.62 ಕೋಟಿ

ಪ್ರತಿ ದಿನ ನೆಲೆ ಕಳೆದುಕೊಳ್ಳುತ್ತಿರುವವರ ಸಂಖ್ಯೆ 44,500

ಅರ್ಧದಷ್ಟು ಮಕ್ಕಳು:

6.8 ಕೋಟಿ ಪೈಕಿ ಸುಮಾರು ನಾಲ್ಕು ಕೋಟಿ ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದರೆ, ಉಳಿದ ಸುಮಾರು 2.5 ಕೋಟಿ ಜನರು ತಮ್ಮ ದೇಶದಾಚೆಗೆ ನೂಕಲ್ಪಟ್ಟಿದ್ದಾರೆ. ಈ ಪೈಕಿ ಅರ್ಧದಷ್ಟು ಮಕ್ಕಳೇ ಇರುವುದು ಅಚ್ಚರಿ ವಿಷಯ.

ಸಿರಿಯಾ ಮೊದಲು, ಎರಡನೇ ಸ್ಥಾನದಲ್ಲಿ ಅಫ್ಗನ್‌:

ಏಳು ವರ್ಷಗಳ ಬಿಕ್ಕಟ್ಟಿನ ಪರಿಣಾಮ ಸಿರಿಯಾವೊಂದಲ್ಲೇ 63 ಲಕ್ಷ ನಿರಾಶ್ರಿತರು ಸೃಷ್ಟಿಯಾಗಿದ್ದಾರೆ. ಈ ಸಂಖ್ಯೆ ಜಾಗತಿಕವಾಗಿ ಮೂರನೇ ಎರಡರಷ್ಟು.

2017ರಲ್ಲಿ ಅತಿಹೆಚ್ಚು ನಿರಾಶ್ರಿತರನ್ನು ಸೃಷ್ಟಿಸಿದ್ದು ಸಿರಿಯಾ. ನಂತರದ ಸ್ಥಾನದಲ್ಲಿ ಅಫ್ಗಾನಿಸ್ತಾನ ಇದೆ. ಇಲ್ಲಿನ 26 ಲಕ್ಷ ಜನರು ನೆಲೆ ಕಳೆದುಕೊಂಡಿದ್ದಾರೆ.

ದಕ್ಷಿಣ ಸೂಡಾನ್‌ನಲ್ಲಿ 24 ಲಕ್ಷ ಜನರು ಮನೆ–ಮಠ ಕಳೆದುಕೊಂಡಿದ್ದಾರೆ.

ರೋಹಿಂಗ್ಯಾ ಮುಸ್ಲಿಮರ ಮೇಲೆ ಮ್ಯಾನ್ಮಾರ್‌ ಸೇನೆ ನಡೆಸಿದ ದೌರ್ಜನ್ಯದ ಪರಿಣಾಮ 12 ಲಕ್ಷ ಜನರು ಬಾಂಗ್ಲಾದೇಶದತ್ತ ಪರಾರಿಯಾದರು.

ಇಸ್ರೇಲ್ ಸ್ವಾತಂತ್ರ್ಯ ಗಳಿಸಿ 70 ವರ್ಷ ಕಳೆದರೂ ಸುಮಾರು 54 ಲಕ್ಷ ಪ್ಯಾಲಿಸ್ಟೀನಿಯರು ನಿರಾಶ್ರಿತರಾಗಿಯೇ ಜೀವನ ಸಾಗಿಸುತ್ತಿದ್ದಾರೆ.

ಇರಾಕ್, ಸೋಮಾಲಿಯಾ, ಸೂಡಾನ್ ಹಾಗೂ ಕಾಂಗೊ ದೇಶಗಳಲ್ಲೂ ಈ ಸಮಸ್ಯೆ ಕಾಡುತ್ತಿದೆ

ವಲಸಿಗರು ಐರೋಪ್ಯ ದೇಶಗಳು, ಅಮೆರಿಕದ ಕದ ಬಡಿಯುತ್ತಿದ್ದರೂ ಶೇ 85ರಷ್ಟು ಜನರು ಕೆಳ, ಮಧ್ಯಮ ಅರ್ಥವ್ಯವಸ್ಥೆ ಹೊಂದಿರುವ ದೇಶಗಳಾದ ಲೆಬನಾನ್, ಪಾಕಿಸ್ತಾನ, ಉಗಾಂಡದಂತಹ ದೇಶಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ.

ಆಧಾರ: ಎಎಫ್‌ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT