ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಹವಾಮಾನ ವೈಪರೀತ್ಯ: ಆಸ್ಟ್ರೇಲಿಯಾದಲ್ಲಿ 9 ಜನರು ಸಾವು

ಭಾರಿ ಹವಾಮಾನ ವೈಪರೀತ್ಯದಿಂದ 9 ಜನ ಮೃತಪಟ್ಟಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.
Published 27 ಡಿಸೆಂಬರ್ 2023, 5:05 IST
Last Updated 27 ಡಿಸೆಂಬರ್ 2023, 5:05 IST
ಅಕ್ಷರ ಗಾತ್ರ

ಬ್ರಿಸ್‌ಬೇನ್ (ಆಸ್ಟ್ರೇಲಿಯಾ): ಭಾರಿ ಹವಾಮಾನ ವೈಪರೀತ್ಯದಿಂದ 9 ಜನ ಮೃತಪಟ್ಟಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

ಕ್ವೀನ್ಸ್‌ಲ್ಯಾಂಡ್, ವಿಕ್ಟೋರಿಯಾ ಸೇರಿದಂತೆ ಆಸ್ಟ್ರೇಲಿಯಾದ ಆಗ್ನೇಯ ಭಾಗದ ಹಲವೆಡೆ ಸೋಮವಾರದಿಂದ ಭಾರಿ ಗಾಳಿ, ಮಳೆ, ಚಳಿ ಕಾಣಿಸಿಕೊಂಡಿದ್ದು, ಇದೊಂದು ಕರಾಳ ಹವಾಮಾನ ವೈಪರೀತ್ಯ ಎಂದು ಕ್ವೀನ್ಸ್‌ಲ್ಯಾಂಡ್ ಪೊಲೀಸ್ ಕಮಿಷನರ್ ಕತ್ರಿನಾ ಕ್ಯಾರೊಲಾ ತಿಳಿಸಿದ್ದಾರೆ.

ಕ್ವೀನ್ಸ್‌ಲ್ಯಾಂಡ್ ಕರಾವಳಿಯಲ್ಲಿ ಬೋಟ್ ಮಗುಚಿ ಮೂರು ಜನ ಮೃತಪಟ್ಟಿದ್ದಾರೆ. 11 ಜನ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ಮೇರಿ ನದಿಯಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಕ್ವೀನ್ಸ್‌ಲ್ಯಾಂಡ್‌ನಲ್ಲಿ ಮರ ಬಿದ್ದು ಒಬ್ಬ ಮಹಿಳೆ, ಒಂದು ಮಗು ಮೃತಪಟ್ಟಿದ್ದಾರೆ.

ಕಾಲುವೆ ನೀರಿನಲ್ಲಿ ಸಿಲುಕಿ ಒಬ್ಬ ಮಹಿಳೆ ಮೃತಪಟ್ಟರೆ, ಗಾಳಿಗೆ ಮನೆಯ ಛಾವಣಿ ಕುಸಿದು ಯುವಕನೊಬ್ಬ ಮೃತಪಟ್ಟಿರುವ ಘಟನೆ ವಿಕ್ಟೋರಿಯಾದಲ್ಲಿ ನಡೆದಿದೆ. ಈ ಎಲ್ಲ ಘಟನೆಗಳು ಕಳೆದ ಎರಡು ದಿನಗಳ ಅಂತರದಲ್ಲಿ ಸಂಭವಿಸಿವೆ.

ಗಾಳಿ ಮಳೆಗೆ ಸಾವಿರಾರು ವಿದ್ಯುತ್ ಮಾರ್ಗಗಳು ಹಾಳಾಗಿದ್ದು, ಇದರಿಂದ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಸುಮಾರು 85 ಸಾವಿರ ಜನ ಸೋಮವಾರದಿಂದ ವಿದ್ಯುತ್ ಇಲ್ಲದೇ ಕಾಲ ಕಳೆದಿದ್ದಾರೆ ಎಂದು ಅಲ್ಲಿನ ಸ್ಥಳೀಯಾಡಳಿತ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT