ಕೈರೊ: ಸುಡಾನ್‌ನ ರೆಡ್ ಸಿ ರಾಜ್ಯದಲ್ಲಿ ಅಣೆಕಟ್ಟೆಯೊಂದು ಒಡೆದಿದ್ದು, ಪ್ರವಾಹದಿಂದಾಗಿ ಕನಿಷ್ಠ ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.
ರೆಡ್ ಸಿ ರಾಜ್ಯದಲ್ಲಿ ಈಚೆಗೆ ಭಾರಿ ಮಳೆಯಾಗುತ್ತಿದ್ದು, ‘ಅರ್ಬಾತ್’ ಅಣೆಕಟ್ಟು ಒಡೆದಿದೆ. ಸಂತ್ರಸ್ತರಿಗೆ ನೆರವಾಗಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ. ಎಷ್ಟು ಜನರು ನಾಪತ್ತೆಯಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ.
‘ಪ್ರವಾಹಕ್ಕೆ ಸಿಲುಕಿ ಕನಿಷ್ಠ 60 ಮಂದಿ ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ ಎಂಬುದಾಗಿ ಅಂದಾಜಿಸಿದ್ದೇನೆ’ ಎಂದು ಅಧಿಕಾರಿಯೊಬ್ಬರು ಸ್ಥಳೀಯ ಮಾಧ್ಯಮ ಅಲ್–ತಘೀರ್‌ಗೆ ತಿಳಿಸಿದ್ದಾರೆ.