ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ಮೂಲಕ ಔಷಧ ಪೂರೈಸಿ 10 ಜನರ ಆತ್ಮಹತ್ಯೆಗೆ ಸಹಾಯ ಮಾಡಿದ್ದ ವ್ಯಕ್ತಿ ದೋಷಿ!

ನೆದರ್ಲೆಂಡ್ಸ್ ನಲ್ಲಿ ನಡೆದ ಘಟನೆ
Published 18 ಜುಲೈ 2023, 15:46 IST
Last Updated 18 ಜುಲೈ 2023, 15:46 IST
ಅಕ್ಷರ ಗಾತ್ರ

ದಿ ಹೇಗ್‌: ಕನಿಷ್ಠ 10 ಮಂದಿ ಆತ್ಮಹತ್ಯೆ ಮಾಡಿಕೊಳ್ಳಲು ಆನ್‌ಲೈನ್‌ ಮೂಲಕ ಔಷಧ ಪೂರೈಸಿ ಸಹಕರಿಸಿದ್ದ ಹಾಗೂ ಅದರ ಬಳಕೆ ಕುರಿತು ಮಾಹಿತಿ ನೀಡಿದ್ದ ವ್ಯಕ್ತಿಯನ್ನು ಡಚ್‌ ನ್ಯಾಯಾಲಯವೊಂದು ದೋಷಿ ಎಂದು ನಿರ್ಧರಿಸಿ ಮಂಗಳವಾರ ತೀರ್ಪು ನೀಡಿದೆ. 

‘ಡಚ್‌ ಆತ್ಮಹತ್ಯಾ ಹಕ್ಕು ನೀತಿಯ ನೂತನ ಪ್ರಕರಣ ಇದಾಗಿದ್ದು, ದೋಷಿಯನ್ನು ಅಲೆಕ್ಸ್‌ ಎಸ್‌. ಎಂದು ಗುರುತಿಸಲಾಗಿದೆ. ಪೊಲೀಸರು ಬಂಧಿಸುವುದಕ್ಕೂ ಮುನ್ನ ಈತ 1,600 ಮಂದಿಗೆ ಔಷಧ ನೀಡಿದ್ದ. ಈತ ಮೊದಲು ಆನ್‌ಲೈನ್‌ ಮೂಲಕ ತನಗಾಗಿ ಔಷಧ ತರಿಸಿಕೊಂಡಿದ್ದ’ ಎಂದು ಪೂರ್ವ ಬಾರ್ಬಂತ್‌ ಜಿಲ್ಲಾ ನ್ಯಾಯಾಲಯವುಯ ತನ್ನ ತೀರ್ಪಿನಲ್ಲಿ ಹೇಳಿದೆ.

‘ಪ್ರತಿ ವ್ಯಕ್ತಿ ತನ್ನ ಜೀವನದ ಕುರಿತು ನಿರ್ಧರಿಸುವ ಹಕ್ಕನ್ನು ಹೊಂದಿದ್ದಾನೆ ಎಂದು ಮನವರಿಕೆ ಮಾಡಿಕೊಂಡಿದ್ದ ಅಲೆಕ್ಸ್‌, ಈ ಪ್ರದೇಶದಲ್ಲಿ ಸರ್ಕಾರದ ನೀತಿ ಸರಿಯಾಗಿ ಅನುಷ್ಠಾನವಾಗಿಲ್ಲ ಎಂದು ನಂಬಿದ್ದ’ ಎಂದು ಅದು ವಿವರಿಸಿದೆ.

ಇಚ್ಛಾಮರಣವನ್ನು ಅಧಿಕೃತಗೊಳಿಸಿದ ಮೊಟ್ಟ ಮೊದಲ ದೇಶ ನೆದರ್ಲೆಂಡ್ಸ್. ಈ ಕಾನೂನನ್ನು 2002ರಲ್ಲಿ ಜಾರಿಗೆ ತರಲಾಯಿತು. ಇದರ ಪ್ರಕಾರ, ಅನಿವಾರ್ಯ ಸಂದರ್ಭಗಳಲ್ಲಿ ಇಚ್ಛಾಮರಣ ಬಯಸುವವರು ವೈದ್ಯರ ಸಲಹೆ ಮೇರೆಗ ಔಷಧ ಪಡೆಯಬಹದು. ಆದರೆ, ವೈದ್ಯರನ್ನು ಹೊರತುಪಡಿಸಿ, ಇತರರು ಈ ಔಷಧ ನೀಡಲು ಅರ್ಹರಾಗಿರುವುದಿಲ್ಲ. ಒಂದು ವೇಳೆ ಅನರ್ಹ ವ್ಯಕ್ತಿಗಳು ಇಂಥ ಕೃತ್ಯದಲ್ಲಿ ಭಾಗಿಯಾದರೆ, ಅದನ್ನು ಕಾನೂನುಬಾಹಿರ ಚಟುವಟಿಕೆ ಎಂದು ಪರಿಗಣಿಸಲಾಗುತ್ತದೆ.

‘ಅಲೆಕ್ಸ್‌ ಇತರರ ಜೀವವನ್ನು ಲಘುವಾಗಿ ಪರಿಗಣಿಸಿ, ಮಾನವ ಜೀವಿಗಳಿಗೆ ಹಾನಿ ಮಾಡಿದ್ದಾನೆ. ತುಂಬಾ ಎಚ್ಚರಿಕೆಯಿಂದ ರೂಪಿಸಿದ ಡಚ್‌ ಆತ್ಮಹತ್ಯಾ ಹಕ್ಕು ನೀತಿಯನ್ನು ದುರ್ಬಲಗೊಳಿಸಲು ಯತ್ನಿಸಿದ್ದಾನೆ. ಆತ್ಮಹತ್ಯಾ ಔಷಧದಿಂದ ನೋವಾಗದೇ ಮೃತಪಡುತ್ತೀರಿ ಎಂದು ಈತ ಖರೀದಾರರಿಗೆ ಹೇಳುತ್ತಿದ್ದ. ಆದರೆ, ಯಾವುದೇ ಔಷಧದಿಂದ ವ್ಯಕ್ತಿ ನೋವು ರಹಿತ ಸಾವಿಗೀಡಾಗಲು ಸಾಧ್ಯವಿಲ್ಲ’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT