ಇನ್ನೊಂದೆಡೆ ಶನಿವಾರ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಹಿಜ್ಬುಲ್ಲಾ ಸಂಘಟನೆಯ ಮತ್ತೊಬ್ಬ ಮುಖಂಡ ಮೃತಪಟ್ಟಿದ್ದಾನೆ ಎಂದು ಇಸ್ರೇಲ್ ಸೇನಾಧಿಕಾರಿಗಳು ಹೇಳಿದ್ದಾರೆ.
ದಾಳಿಯಲ್ಲಿ ಹಿಜ್ಬುಲ್ಲಾ ಕೇಂದ್ರ ಸಮಿತಿಯ ಉಪ ಮುಖ್ಯಸ್ಥ ನಬಿಲ್ ಕಾವುಕ್ ಎನ್ನುವರು ಮೃತಪಟ್ಟಿದ್ದಾರೆ. ಶುಕ್ರವಾರವಷ್ಟೇ ಹಿಜ್ಬುಲ್ಲಾದ ಮುಖ್ಯಸ್ಥ ಸಯ್ಯದ್ ಹಸನ್ ನಸ್ರಲ್ಲಾರನ್ನು ಇಸ್ರೇಲ್ ವಾಯುದಾಳಿ ಮಾಡಿ ಹತ್ಯೆ ಮಾಡಿತ್ತು.
‘ನಸ್ರಲ್ಲಾ ಅವರ ಹತ್ಯೆಯ ಬಳಿಕ ಯುದ್ಧ ನಿಲ್ಲಲಿದೆ ಎಂದು ತಿಳಿಯಬೇಕಿಲ್ಲ’ ಎಂದು ಇಸ್ರೇಲ್ ಹೇಳಿದೆ. ಹಿಜ್ಬುಲ್ಲಾ ಸಂಘಟನೆ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ನಮ್ಮ ಶತ್ರುವಿನ ವಿರುದ್ಧ ಹಾಗೂ ಪ್ಯಾಲೆಸ್ಟೀನ್ ಪರವಾದ ನಮ್ಮ ಈ ಪವಿತ್ರ ಯುದ್ಧವು ಮುಂದುವರಿಯಲಿದೆ’ ಎಂದಿದೆ.
ನಸ್ರಲ್ಲಾ ಅವರ ಹತ್ಯೆಯನ್ನು ಇಸ್ರೇಲಿಗರು ಸಂಭ್ರಮಿಸುತ್ತಿದ್ದಾರೆ. ಹಾಗೆಯೇ ಯುದ್ಧ ಮತ್ತೆ ವ್ಯಾಪಕತೆಯನ್ನು ತೆಗೆದುಕೊಂಡಿರುವುದಕ್ಕೆ ಆತಂಕವನ್ನೂ ವ್ಯಕ್ತಪಡಿಸುತ್ತಿದ್ದಾರೆ.