ಇಸ್ಲಾಮಾಬಾದ್: ಪ್ರಕರಣವೊಂದರ ವಿಚಾರಣೆಗೆ ಸತತವಾಗಿ ಗೈರಾಗಿದ್ದಕ್ಕೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸಹೋದರಿ ಅಲೀಮಾ ಖಾನ್ ವಿರುದ್ಧ ಪಾಕಿಸ್ತಾನದ ಉಗ್ರವಾದ ನಿಗ್ರಹ ನ್ಯಾಯಾಲಯವೊಂದು (ಎಟಿಸಿ) ಬುಧವಾರ ಜಾಮಿನು ರಹಿತ ವಾರಂಟ್ ಹೊರಡಿಸಿದೆ.
.ಪಾಕಿಸ್ತಾನ| 2023ರ ಗಲಭೆ: ಇಮ್ರಾನ್ ಖಾನ್ 17 ಬೆಂಬಲಿಗರಿಗೆ 10 ವರ್ಷ ಜೈಲು ಶಿಕ್ಷೆ.
ಕಳೆದ ವರ್ಷ ನವೆಂಬರ್ ನಲ್ಲಿ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷ ನಡೆಸಿದ್ದ ಪ್ರತಿಭಟನೆ ಸಂಬಂಧ ರಾವಲ್ಪಿಂಡಿಯ ಉಗ್ರವಾದ ನಿಗ್ರಹ ನ್ಯಾಯಾಲಯವು ನೋಟಿಸ್ ಜಾರಿ ಮಾಡುತ್ತಿರುವುದು ಇದು ನಾಲ್ಕನೇ ಬಾರಿ ಎಂದು ‘ಡಾನ್’ ದಿನಪತ್ರಿಕೆ ವರದಿ ಮಾಡಿದೆ.

ಕೋರ್ಟ್ ವಿಚಾರಣೆ ವೇಳೆ 11 ಆರೋಪಿಗಳ ಪೈಕಿ 10 ಮಂದಿ ಹಾಜರಾಗಿದ್ದು, ಅಲೀಮಾ ಮಾತ್ರ ಗೈರಾಗಿದ್ದರು. ಹೀಗಾಗಿ ಎಟಿಸಿ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ ಎಂದು ವರದಿ ತಿಳಿಸಿದೆ.

ಬೋಗಸ್ ವರದಿ ಸಲ್ಲಿಸಿದ ರಾವಲ್ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಸಾದ್ ಅರ್ಷಾದ್ ಹಾಗೂ ಉಪ ಪೊಲೀಸ್ ವರಿಷ್ಠಾಧಿಕಾರಿ ನಯೀಮ್ ಅವರಿಗೆ ಇದೇ ವೇಳೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಅಲ್ಲದೆ ನ್ಯಾಯಾಂಗ ನಿಂದನೆಯ ನೋಟಿಸ್ ಕೂಡ ನೀಡಿದೆ.
.ಭಾರತದಲ್ಲಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಾಮಾಜಿಕ ಮಾಧ್ಯಮ ಖಾತೆ ನಿರ್ಬಂಧ.
ಅಲೀಮಾ ಅವರು ತಲೆ ಮರೆಸಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ ಎಂದು ಈ ಅಧಿಕಾರಿಗಳು ವರದಿ ನೀಡಿದ್ದಾರೆ ಎಂದು ಕೋರ್ಟ್ ಹೇಳಿದೆ. ಆದರೆ ಅವರು ಅದಿಯಾಲ ಜೈಲಿನಲ್ಲಿ ಇಮ್ರಾನ್ ಖಾನ್ ಅವರನ್ನು ಭೇಟಿಯಾಗಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.

ಅಕ್ಟೋಬರ್ 22ರಂದು ಅಲೀಮಾ ಅವರನ್ನು ಬಂಧಿಸಿ ಹಾಜರು ಪಡಿಸಬೇಕು ಎಂದು ಕಳೆದ ವಿಚಾರಣೆ ವೇಳೆ ಕೋರ್ಟ್ ಹೇಳಿತ್ತು.
.ಪಾಕಿಸ್ತಾನದಿಂದ ಪಲಾಯನ ಮಾಡುವ ಅವಕಾಶ ನೀಡಲಾಗಿತ್ತು: ಇಮ್ರಾನ್ ಖಾನ್ .
ಸಾರ್ವಜನಿಕವಾಗಿ ಗುಂಪುಗೂಡಲು ನಿಷೇಧ ಇದ್ದರೂ, ಕಳೆದ ವರ್ಷ ನವೆಂಬರ್ 26 ರಂದು ಸುಮಾರು 10 ಸಾವಿರ ಪಿಟಿಐ ಕಾರ್ತಕರ್ತರು ಇಸ್ಲಾಮಾಬಾದ್ ಗೆ ನುಗ್ಗಿ, ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದರು.

ಈ ಪ್ರಕರಣ ಸಂಬಂಧ ಹಲವರ ವಿರುದ್ಧ ಪಾಕಿಸ್ತಾನ ದಂಡ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿತ್ತು.
.ಪಾಕಿಸ್ತಾನ: ಅಸಹಕಾರ ಚಳವಳಿ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.