ವಿಶ್ವಸಂಸ್ಥೆ: 'ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಸುಂಕ ಸಮರದಿಂದಾಗಿ ಎಲ್ಲ ದೇಶಗಳಿಗೂ ನಷ್ಟವಾಗಲಿದೆ' ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಎಚ್ಚರಿಸಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕ ಸುಂಕ ವಿಧಿಸುವ ನೀತಿಯ ಬೆನ್ನಲ್ಲೇ ಹಲವು ರಾಷ್ಟ್ರಗಳು ಪ್ರತಿ ಸುಂಕ ವಿಧಿಸುವುದಾಗಿ ಪ್ರಕಟಿಸಿದೆ. ಇದರಿಂದಾಗಿ ಜಾಗತಿಕವಾಗಿ ವಾಣಿಜ್ಯ ಬಿಕ್ಕಟ್ಟು ತಲೆದೋರಿದೆ.

ಜಾಗತಿಕ ಸುಂಕ ಸಮರದ ಕುರಿತು ಪ್ರತಿಕ್ರಿಯಿಸಿದ ಅವರು, 'ಜಾಗತಿಕ ಆರ್ಥಿಕತೆಯಲ್ಲಿ ನಾವಿದ್ದೇವೆ ಎಂದು ನಾನು ಭಾವಿಸುತ್ತೇನೆ. ಎಲ್ಲವೂ ಪರಸ್ಪರ ಸಂಬಂಧ ಹೊಂದಿವೆ. ಮುಕ್ತ ವ್ಯಾಪಾರ ನೀತಿ ಹೊಂದುವ ಅನುಕೂಲವೆಂದರೆ ಎಲ್ಲ ದೇಶಗಳಿಗೆ ಪ್ರಯೋಜನ ಸಿಗಲಿವೆ. ಆದರೆ ಸುಂಕ ಸಮರಕ್ಕೆ ಅಡಿಯಿಟ್ಟಾಗ ಎಲ್ಲರಿಗೂ ನಷ್ಟವಾಗಲಿದೆ' ಎಂದು ಗುಟೆರಸ್ ಹೇಳಿದ್ದಾರೆ.

ಎರಡನೇ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್, ಅಮೆರಿಕದ ಮೇಲೆ ಅಧಿಕ ಸುಂಕ ವಿಧಿಸುವ ರಾಷ್ಟ್ರಗಳ ಮೇಲೆ ಅಮೆರಿಕ ಪ್ರತಿ ಸುಂಕ ವಿಧಿಸುವುದಾಗಿ ಘೋಷಿಸಿದ್ದರು.

'ಸುಂಕ ಹೆಚ್ಚಳದ ಮೂಲಕ ಅಮೆರಿಕಕ್ಕೆ ನೂರಾರು ಬಿಲಿಯನ್ ಡಾಲರ್ಗಳ ಆದಾಯ ಸಿಗಲಿದೆ. ಅಮೆರಿಕ ಮತ್ತೆ ಶ್ರೀಮಂತವಾಗಲಿದೆ. ಈ ಹಣವನ್ನು ಎಲ್ಲಿ ಖರ್ಚು ಮಾಡಬೇಕೆಂದು ಗೊತ್ತಿದೆ. ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿವೆ' ಎಂದು ಟ್ರಂಪ್ ಹೇಳಿದ್ದರು.

ಇದಕ್ಕೆ ಪ್ರತಿಯಾಗಿ ಅಮೆರಿಕದಿಂದ ಆಮದು ಮಾಡಿಕೊಳ್ಳುವ ಸರಕುಗಳಿಗೆ ಪ್ರತಿ ಸುಂಕ ವಿಧಿಸುವುದಾಗಿ ಯುರೋಪಿಯನ್ ಒಕ್ಕೂಟ (ಇಯು) ಹಾಗೂ ಕೆನಡಾ ಘೋಷಿಸಿದೆ.

ಭಾರತ ಕೂಡ ಹೆಚ್ಚಿನ ಸುಂಕ ವಿಧಿಸುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದರು.
.ಸುಂಕ ಸಮರ | ಅಮೆರಿಕದ ಉತ್ಪನ್ನಗಳಿಗೆ ಪ್ರತಿ ಸುಂಕ: ಯುರೋಪಿಯನ್ ಒಕ್ಕೂಟ ಘೋಷಣೆ.ಕದನವಿರಾಮ ತಿರಸ್ಕರಿಸುವುದು ರಷ್ಯಾಕ್ಕೆ ವಿನಾಶಕಾರಿ: ಪುಟಿನ್ಗೆ ಟ್ರಂಪ್ ಎಚ್ಚರಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.