ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಆಸ್ಕರ್‌: ‘ಅನೋರಾ’ ಅತ್ಯುತ್ತಮ ಚಿತ್ರ

ಐದು ವಿಭಾಗಗಳಲ್ಲಿ ಪ್ರಶಸ್ತಿ ಬಾಚಿದ ಸಿನಿಮಾ * ಆ್ಯಡ್ರಿಯನ್‌ ಬ್ರಾಡಿ, ಮೈಕಿ ಮ್ಯಾಡಿಸನ್‌ ಅತ್ಯುತ್ತಮ ನಟ, ನಟಿ
Published : 4 ಮಾರ್ಚ್ 2025, 0:10 IST
Last Updated : 4 ಮಾರ್ಚ್ 2025, 0:10 IST
ಫಾಲೋ ಮಾಡಿ
Comments
‘ಅನೋರಾ’ ಚಿತ್ರಕ್ಕಾಗಿ ನಾಲ್ಕು ಪ್ರಶಸ್ತಿಗಳನ್ನು ಪಡೆದ ನಿರ್ದೇಶಕ ಸೀನ್‌ ಬೇಕರ್‌ – ಎಪಿ/ಪಿಟಿಐ ಚಿತ್ರ
‘ಅನೋರಾ’ ಚಿತ್ರಕ್ಕಾಗಿ ನಾಲ್ಕು ಪ್ರಶಸ್ತಿಗಳನ್ನು ಪಡೆದ ನಿರ್ದೇಶಕ ಸೀನ್‌ ಬೇಕರ್‌ – ಎಪಿ/ಪಿಟಿಐ ಚಿತ್ರ
ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಆ್ಯಡ್ರಿಯನ್‌ ಬ್ರಾಡಿ –ಎಎಫ್‌ಪಿ ಚಿತ್ರ
ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಆ್ಯಡ್ರಿಯನ್‌ ಬ್ರಾಡಿ –ಎಎಫ್‌ಪಿ ಚಿತ್ರ
ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಆ್ಯಡ್ರಿಯನ್‌ ಬ್ರಾಡಿ –ಎಎಫ್‌ಪಿ ಚಿತ್ರ
ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಆ್ಯಡ್ರಿಯನ್‌ ಬ್ರಾಡಿ –ಎಎಫ್‌ಪಿ ಚಿತ್ರ
ಗಾಜಾ ಬಿಕ್ಕಟ್ಟು ಚಿತ್ರಕ್ಕೆ ಪ್ರಶಸ್ತಿ
ಇಸ್ರೇಲ್‌ ಮತ್ತು ಪ್ಯಾಲೆಸ್ಟೀನ್‌ ಸಂಘರ್ಷದಿಂದ ಎದುರಾದ ಸಂಕಷ್ಟಗಳನ್ನು ಅನಾವರಣಗೊಳಿಸುವ 'ನೋ ಅದರ್ ಲ್ಯಾಂಡ್‌' ಚಿತ್ರವು ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಪ್ರಶಸ್ತಿ ಗಿಟ್ಟಿಸಿದೆ. ಪ್ಯಾಲಿಸ್ಟೀನ್‌ ಹೋರಾಟಗಾರ ಬಸೇಲ್‌ ಆದ್ರಾ ಇಸ್ರೇಲಿ ಪತ್ರಕರ್ತ ಯುವಾಲ್‌ ಅಬ್ರಾಹಂ ಅವರು ಜೊತೆಯಾಗಿ ಸುಮಾರು ಐದು ವರ್ಷಗಳು ಶ್ರಮಿಸಿ ಈ ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ. ಮಿಲಿಟರಿ ತರಬೇತಿಯ ಮೈದಾನಕ್ಕಾಗಿ ಇಸ್ರೇಲಿ ಯೋಧರು ಮನೆಗಳನ್ನು ಕೆಡುವುದು ಸೇರಿದಂತೆ ಸಂಘರ್ಷದಿಂದ ಜನರು ಅನುಭವಿಸಿದ ಪರಿಸ್ಥಿತಿಗಳನ್ನು ಚಿತ್ರದಲ್ಲಿ ಬಿಂಬಿಸಲಾಗಿದೆ. ‘ನೋ ಅದರ್ ಲ್ಯಾಂಡ್‌ ವಾಸ್ತವ ಸಂಗತಿಗಳನ್ನು ಬಿಚ್ಚಿಟ್ಟಿದೆ. ಗಾಜಾದಲ್ಲಿ ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ನಿಲ್ಲಬೇಕು. ಗಾಜಾ ಮತ್ತು ಇಸ್ರೇಲ್‌ನ ಸಂಘರ್ಷವನ್ನು ಜಗತ್ತು ಅಂತ್ಯಗೊಳಿಸಬೇಕು. ಆದರೆ ಅಮೆರಿಕವು ತಡೆಯೊಡ್ಡುತ್ತಿದೆ’ ಎಂದು ನಿರ್ದೇಶಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಅನುಜಾ’ಗೆ ತಪ್ಪಿದ ಆಸ್ಕರ್‌
ನವದೆಹಲಿ (ಪಿಟಿಐ): ‘ಬೆಸ್ಟ್‌ ಲೈವ್‌ ಆಕ್ಷನ್‌ ಶಾರ್ಟ್‌ ಫಿಲ್ಮ್‌’ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದ ಕಿರುಚಿತ್ರ ‘ಅನುಜಾ’ಗೆ ಆಸ್ಕರ್‌ ಪ್ರಶಸ್ತಿ ಕೈತಪ್ಪಿದೆ. ಈ ವಿಭಾಗದಲ್ಲಿ 'ಐ ಆ್ಯಮ್‌ ನಾಟ್‌ ಟ ರೊಬೋಟ್‌' ಆಯ್ಕೆಯಾಗಿದೆ.  ಆಡಂ ಜೆ ಗ್ರೇವ್ಸ್‌ ಮತ್ತು ಸುಚಿತ್ರಾ ಮಟ್ಟೈ ಅವರು ‘ಅನುಜಾ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಬಾಲ ಕಾರ್ಮಿಕ ಪದ್ಧತಿ ಸಮಸ್ಯೆ ಬಗ್ಗೆ ಗಮನ ಸೆಳೆಯುತ್ತದೆ. ಎರಡು ಬಾರಿ ಆಸ್ಕರ್‌ ವಿಜೇತ ನಿರ್ಮಾಪಕ ಗುನೀತ್‌ ಮೊಂಗಾ ಮತ್ತು ನಟಿ ಪ್ರಿಯಾಂಕಾ ಚೋಪ್ರಾ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದು ಹಾಲಿವುಡ್‌ನ ಪ್ರಸಿದ್ಧ ಲೇಖಕ ಮಿಂಡಿ ಕಾಲಿಂಗ್‌ ನಿರ್ಮಾಪಕರಾಗಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT