ಕೈರೊ: ಆಸ್ಪತ್ರೆಗಳ ಮೇಲಿನ ದಾಳಿ ಸಂದರ್ಭದಲ್ಲಿ ವಶಕ್ಕೆ ಪಡೆದಿದ್ದ ಹಲವು ವೈದ್ಯರು, ನರ್ಸ್ಗಳು, ಆರೋಗ್ಯ ಸಿಬ್ಬಂದಿಯನ್ನು ಕದನ ವಿರಾಮ ಒಪ್ಪಂದದ ಅನುಸಾರ ಇಸ್ರೇಲ್ ಬಿಡುಗಡೆ ಮಾಡಿದೆ. ಆದರೆ ಡಾ.ಹೊಸ್ಸಾಮ್ ಅಬು ಸಫಿಯಾ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಇನ್ನೂ ಇಸ್ರೇಲ್ ಜೈಲಿನಲ್ಲಿದ್ದಾರೆ.

ಅಬು ಸಫಿಯಾ ಅವರನ್ನು ಬಿಡುಗಡೆ ಮಾಡುವಂತೆ ವ್ಯಾಪಕ ಆಗ್ರಹ ವ್ಯಕ್ತವಾಗುತ್ತಿದೆ. ಆದರೂ ಹಮಾಸ್ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ 20 ಮಂದಿಯ ಬಿಡುಗಡೆಗೆ ಪ್ರತಿಯಾಗಿ ಇಸ್ರೇಲ್ ಬಿಡುಗಡೆ ಮಾಡಿರುವ ಪ್ಯಾಲೆಸ್ಟೀನ್ ಕೈದಿಗಳಲ್ಲಿ ಸಫಿಯಾ ಅವರು ಇಲ್ಲ.

ಉತ್ತರ ಗಾಜಾದ ಕಲಾಂ ಅದ್ವಾನ್ ಆಸ್ಪತ್ರೆಯ ನಿರ್ದೇಶಕ ಅಬು ಸಫಿಯಾ ಅವರನ್ನು ಕಳೆದ 10 ತಿಂಗಳಿನಿಂದ ಯಾವುದೇ ಆರೋಪಗಳಿಲ್ಲದೆ ಇಸ್ರೇಲ್ ಬಂಧಿಸಿದೆ.

31 ವೈದ್ಯರು ಮತ್ತು ನರ್ಸ್ಗಳು ಸೇರಿದಂತೆ 55 ವೈದ್ಯಕೀಯ ಸಿಬ್ಬಂದಿಯನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ. ಇನ್ನೂ 115 ವೈದ್ಯಕೀಯ ಸಿಬ್ಬಂದಿ ಇಸ್ರೇಲ್ ವಶದಲ್ಲಿದ್ದಾರೆ. ಇಸ್ರೇಲ್ ಕಾರಾಗೃಹಗಳಲ್ಲಿ ಮೃತಪಟ್ಟ ನಾಲ್ಕು ಮಂದಿಯ ಮೃತದೇಹವೂ ಹಸ್ತಾಂತರಗೊಂಡಿಲ್ಲ ಎಂದು ಸಂಘಟನೆಯೊಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.