ವಿಶ್ವಸಂಸ್ಥೆ: 1.8 ಕೋಟಿ ಭಾರತೀಯರು ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ವಾಸಿಸುತ್ತಿದ್ದು, ಈ ಮೂಲಕ ಭಾರತ ವಿಶ್ವದಲ್ಲೇ ವಿದೇಶಗಳಲ್ಲಿ ಹೆಚ್ಚು ಜನರನ್ನು ಹೊಂದಿರುವ ರಾಷ್ಟ್ರಗಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ವಿಭಾಗದ (ಯುಎನ್ ಡಿಇಎಸ್‌ಎ) ಜನಸಂಖ್ಯಾ ವಿಭಾಗ ‘ಇಂಟರ್‌ನ್ಯಾಷನಲ್ ಮೈಗ್ರೇಶನ್– 2020 ಹೈಲೈಟ್ಸ್’ ಎಂಬ ವರದಿ ಬಿಡುಗಡೆ ಮಾಡಿದೆ. 2020ರ ಅಂಕಿ–ಅಂಶದಂತೆ 1.8 ಕೋಟಿ ಭಾರತೀಯರು ಇತರ ದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದೆ.

ಸಂಯುಕ್ತ ಅರಬ್ ರಾಷ್ಟ್ರಗಳು (ಯುಎಇ), ಅಮೆರಿಕ ಮತ್ತು ಸೌದಿ ಅರೇಬಿಯಾದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಭಾರತೀಯರು ನೆಲೆಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಭಾರತದ ನಾಗರಿಕರು ವಿಶ್ವದಾದ್ಯಂತ ನೆಲೆಸಿದ್ದಾರೆ. ಇದು ಭಾರತೀಯ ವಲಸಿಗರ ಮತ್ತೊಂದು ವೈಶಿಷ್ಟ್ಯವಾಗಿದೆ‘ ಎಂದು ಯುಎನ್ ಡಿಇಎಸ್‌ಎ ಜನಸಂಖ್ಯಾ ವ್ಯವಹಾಗಳ ಅಧಿಕಾರಿ ಕ್ಲೇರ್ ಮೆನೊಜಿ ತಿಳಿಸಿದ್ದಾರೆ.

‘ಹಲವು ದೇಶಗಳಲ್ಲಿ, ಆಯಾ ದೇಶದ ಜನರು ಒಂದು ಪ್ರದೇಶದಲ್ಲಿ ಗುಂಪಾಗಿ ನೆಲೆಸಿರುವ ಈ ಸಂದರ್ಭದಲ್ಲಿ ಭಾರತೀಯರು ವಿಶ್ವದ ಎಲ್ಲಾ ಖಂಡಗಳು ಮತ್ತು ಪ್ರದೇಶಗಳಲ್ಲಿ ನೆಲೆಸಿರುವುದು ಆಸಕ್ತಿದಾಯಕವಾಗಿದೆ. ಭಾರತೀಯರು ಕೊಲ್ಲಿಯಿಂದ ಉತ್ತರ ಅಮೆರಿಕದವರೆಗೆ ಆಸ್ಟ್ರೇಲಿಯಾ, ಬ್ರಿಟನ್‌ವರೆಗೂ ನೆಲೆಸಿದ್ದಾರೆ‘ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.