ಮೆಕ್ಸಿಕೊ: ಬಸ್ಸೊಂದು ಕಂದಕಕ್ಕೆ ಉರುಳಿ 20 ಮಂದಿ ಮೃತಪಟ್ಟಿರುವ ಘಟನೆ ದಕ್ಷಿಣ ಮೆಕ್ಸಿಕೊದ ಓಕ್ಸಾಕಾ ರಾಜ್ಯದಲ್ಲಿ ನಡೆದಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿಯ ವಕ್ತಾರರು ತಿಳಿಸಿದ್ದಾರೆ.

ಘಟನೆಯಲ್ಲಿ 17 ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಆದರೆ, ಸ್ಥಳೀಯ ಸುದ್ದಿ ಮಾಧ್ಯಮ ಮಿಲೆನಿಯೊ 25 ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿ ಮಾಡಿದೆ.

ಮ್ಯಾಗ್ಡಲೇನಾ ಪೆನಾಸ್ಕೊ ಪಟ್ಟಣದಲ್ಲಿ ಅಪಘಾತ ಸಂಭವಿಸಿದೆ ಎಂದು ರಾಜ್ಯದ ಗವರ್ನರ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಬಸ್ ಮೆಕ್ಸಿಕೊ ನಗರದಿಂದ ಪಶ್ಚಿಮ ಓಕ್ಸಾಕಾದ ಯೊಸೊಂಡುವಾಗೆ ಹೋಗುತ್ತಿತ್ತು ಎಂದು ರಾಜ್ಯ ಸಾರಿಗೆ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಮೆಕ್ಸಿಕೊದ ಅಂಕುಡೊಂಕು, ಕಡಿದಾದ ರಸ್ತೆಗಳು ಅಪಘಾತಕ್ಕೆ ಕಾರಣ ಎಂದು ವರದಿ ತಿಳಿಸಿದೆ. ಏಪ್ರಿಲ್ 18ರಂದು ಪಶ್ಚಿಮ ಮೆಕ್ಸಿಕೊದಲ್ಲಿ ಸಂಭವಿಸಿದ್ದ ಬಸ್ ಅಪಘಾತದಲ್ಲಿ 18 ಮಂದಿ ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.