ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೆರಿಕ: ಬಿರುಗಾಳಿಗೆ ಕನಿಷ್ಠ 22 ಬಲಿ

Published 28 ಮೇ 2024, 16:06 IST
Last Updated 28 ಮೇ 2024, 16:06 IST
ಅಕ್ಷರ ಗಾತ್ರ

ಹೂಸ್ಟನ್ / ಯುಎಸ್: ಅಮೆರಿಕದ ಮಧ್ಯ ಮತ್ತು ದಕ್ಷಿಣ ಭಾಗದಲ್ಲಿ ಪ್ರಬಲ ಚಂಡಮಾರುತ ಮತ್ತು ಬಿರುಗಾಳಿ ಸರಣಿಯಿಂದಾಗಿ  ಕನಿಷ್ಠ 22 ಜನರು ಸಾವಿಗೀಡಾಗಿದ್ದಾರೆ. 

ಗಾಳಿಯ ರಭಸಕ್ಕೆ ಅನೇಕ ಮನೆಗಳು ಹಾನಿಗೊಳಗಾಗಿದ್ದು, ಬಹುತೇಕ ಕಡೆ ವಿದ್ಯುತ್‌ ಕಡಿತ ಉಂಟಾಗಿದೆ ಮತ್ತು ಮೂಲಸೌಕರ್ಯಗಳು ನಾಶವಾಗಿವೆ.

ವಿನಾಶಕಾರಿ ಚಂಡಮಾರುತದಿಂದ ಅಮೆರಿಕದ ಮಧ್ಯ ಭಾಗದಲ್ಲಿರುವ ಟೆಕ್ಸಾಸ್‌, ಒಕ್ಲಹೋಮಾ ಮತ್ತು ಅರ್ಕಾನ್ಸಸ್‌ ಮತ್ತು ಕೆಂಟುಕಿಯಲ್ಲಿ ಹೆಚ್ಚು ಸಾವು ಸಂಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರದ ನಂತರ ಪೂರ್ವ ಕರಾವಳಿಯಲ್ಲಿ ಹವಾಮಾನ ತೀವ್ರ ಬದಲಾಗಲಿದೆ ಎಂದು ಹವಾಮಾನ ಇಲಾಖೆಯವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT