ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಪುವಾ ನ್ಯೂಗಿನಿಯಾ | ಬುಡಕಟ್ಟು ಜನಾಂಗದ ನಡುವೆ ಹಿಂಸಾಚಾರ; 53 ಜನರ ಹತ್ಯೆ

Published 19 ಫೆಬ್ರುವರಿ 2024, 2:50 IST
Last Updated 19 ಫೆಬ್ರುವರಿ 2024, 2:50 IST
ಅಕ್ಷರ ಗಾತ್ರ

ಪೋರ್ಟ್ ಮೊರೆಸ್ಬಿ: ಪಪುವಾ ನ್ಯೂಗಿನಿಯಾದ ಬುಡಕಟ್ಟು ಜನಾಂಗದವರ ನಡುವೆ ನಡೆದ ಹಿಂಸಾಚಾರದಲ್ಲಿ 53 ಮಂದಿ ಹತ್ಯೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಧಾನಿ ಪೋರ್ಟ್ ಮೊರೆಸ್ಬಿಯ ವಾಯುವ್ಯಕ್ಕೆ 600 ಕಿ. ಮೀ. ದೂರದಲ್ಲಿರುವ ವಾಬಾಗ್ ಪಟ್ಟಣದ ಬಳಿ ಈ ಘಟನೆ ಸಂಭವಿಸಿದೆ. ಇದು ಸಿಕಿನ್, ಅಂಬ್ಯುಲಿನ್ ಮತ್ತು ಕೇಕಿನ್ ಬುಡಕಟ್ಟು ಜನಾಂಗದವರ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದೆ ಎಂದು ಭಾವಿಸಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಸ್ಯಾಮ್ಸನ್ ಕುವಾ ಹೇಳಿದ್ದಾರೆ.

‘ಬುಡಕಟ್ಟು ಜನಾಂಗದ ನಡುವೆ ಭಾನುವಾರ ಮುಂಜಾನೆ ಹೊಂಚುದಾಳಿ ನಡೆದಿತ್ತು. ಇದಾದ ಬೆನ್ನಲ್ಲೇ ಶವಗಳು ಪತ್ತೆಯಾಗಿವೆ. ಪಪುವಾ ನ್ಯೂಗಿನಿಯಾದ ಹೈಲ್ಯಾಂಡ್ಸ್‌ನಲ್ಲಿ ನೆಲೆಸಿರುವ ಬುಡಕಟ್ಟು ಜನಾಂಗದ ನಡುವೆ ಶತಮಾನಗಳಿಂದ ಸಂಘರ್ಷ ನಡೆಯುತ್ತಿದೆ. ಆದರೆ ಶಸ್ತ್ರಾಸ್ತ್ರಗಳ ಒಳಹರಿವು ಘರ್ಷಣೆಯನ್ನು ಹಿಂಸಾಚಾರಕ್ಕೆ ದೂಡಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT