ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಯಾದಲ್ಲಿ ಬಾಂಬ್ ಸ್ಟೋಟ: 7 ಮಂದಿ ಸಾವು, 30 ಜನರಿಗೆ ಗಾಯ

Published 31 ಮಾರ್ಚ್ 2024, 2:54 IST
Last Updated 31 ಮಾರ್ಚ್ 2024, 2:54 IST
ಅಕ್ಷರ ಗಾತ್ರ

ಬೈರೂತ್: ಟರ್ಕಿ ಗಡಿಗೆ ಸಮೀಪದಲ್ಲಿರುವ ಸಿರಿಯಾದ ಅಜಾಜ್‌ನ ಜನನಿಬಿಡ ಸ್ಥಳದಲ್ಲಿ ಶನಿವಾರ ತಡರಾತ್ರಿ ನಡೆದ ಬಾಂಬ್‌ ಸ್ಫೋಟದಲ್ಲಿ ಕನಿಷ್ಠ 7 ಜನರು ಮೃತಪಟ್ಟಿದ್ದು, ಮೂವತ್ತು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

‘ಅಲೆಪ್ಪೊ ಪ್ರಾಂತ್ಯದ ಅಜಾಜ್‌ನ ಜನಪ್ರಿಯ ಮಾರುಕಟ್ಟೆಯ ಮಧ್ಯದಲ್ಲಿ ಬಾಂಬ್ ಸ್ಫೋಟಗೊಂಡಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ. ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಸಿರಿಯಾದ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.

2011ರಿಂದ 9 ವರ್ಷಗಳ ಕಾಲ ನಡೆದ ಯುದ್ಧದಲ್ಲಿ ಸುಮಾರು 38 ಲಕ್ಷ ಜನರು ಮೃತಪಟ್ಟಿದ್ದರು. ಟರ್ಕಿ ಬೆಂಬಲಿತ ಬಂಡುಕೋರ ಗುಂಪುಗಳು ಮತ್ತು ಅಮೆರಿಕ ಬೆಂಬಲಿತ ಕುರ್ದಿಶ್ ಪಡೆ ಸಿರಿಯಾದ ಹಲವು ಸ್ಥಳಗಳನ್ನು ಆಕ್ರಮಿಸಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT