ಬೆಂಗಳೂರು: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ.

ವ್ಯವಸ್ಥಿತ ದಾಳಿ ಯಶಸ್ವಿಯಾಗಿರುವ ಬಗ್ಗೆ ವಿಡಿಯೊ ಹಂಚಿಕೊಂಡಿರುವ ಇಸ್ರೇಲ್ ವಾಯಸೇನೆ, ನೋಡುಗರನ್ನು ಎದೆನಡುಗಿಸುವಂತೆ ಮಾಡಿದೆ.

ಖಮೇನಿ ಇದ್ದ ಜಾಗವನ್ನು ನಿಖರವಾಗಿ ಪತ್ತೆ ಮಾಡಿ ಅತ್ಯಾಧುನಿಕ ಬಾಂಬ್ಗಳಿಂದ ಸಂಪೂರ್ಣ ಸ್ಥಳವನ್ನು ನಾಶ ಮಾಡುವುದು ವಿಡಿಯೊದಲ್ಲಿ ಕಾಣುತ್ತದೆ.

ಟೆಹರಾನ್ನ ಹೃದಯಭಾಗದಲ್ಲಿರುವ ಇರಾನಿನ ಭಯೋತ್ಪಾದಕರ ಆಡಳಿತದ ಪ್ರಧಾನ ಕಚೇರಿಯ ನಾಶ ಮಾಡಿರುವ ಕೊನೆಯ ನಿಮಿಷಗಳ ದಾಖಲೆ ಇದಾಗಿದೆ ಎಂದು ಇಸ್ರೇಲ್ ವಾಯುಸೇನೆ ಟ್ವಿಟ್ ಮಾಡಿದೆ.

ಇತ್ತ ಇಸ್ರೇಲ್, ಅಮೆರಿಕ ದಾಳಿಯಿಂದ ಕೆರಳಿರುವ ಇರಾನ್ ಮಧ್ಯಪ್ರಾಚ್ಯದ ತನ್ನ ಅನೇಕ ಶತ್ರು ರಾಷ್ಟ್ರಗಳ ಮೇಲೆ ದಾಳಿ ಮುಂದುವರೆಸಿದೆ. ಇದರಿಂದ ಇಡೀ ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿ ಶುರುವಾಗಿದೆ.
.ಖಮೇನಿ ಹತ್ಯೆ ಖಂಡಿಸುವಂತೆ ಎಲ್ಲಾ ದೇಶಗಳನ್ನು ಒತ್ತಾಯಿಸಿದ ಇರಾನ್ ರಾಯಭಾರಿ ಕಚೇರಿ.ಖಮೇನಿ ಹತ್ಯೆ ಬಳಿಕವೂ ಇಸ್ರೇಲ್, ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ಕ್ಷಿಪಣಿ ದಾಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.