ಲಾಸ್ ಎಂಜಲೀಸ್: ಅಮೆರಿಕಕ್ಕೆ ಸೇರಿದ ಕೆರೆಬಿಯನ್ ದ್ವೀಪಗಳ ಸಮೂಹದಲ್ಲಿರುವ ಪ್ವೆಟೊ ರಿಕೊ ಎಂಬ ದ್ವೀಪದ ರ್ಯಾಪರ್, ಗಾಯಕ ಮತ್ತು ನಿರ್ಮಾಪಕ ಬ್ಯಾಡ್ ಬನಿ ಅವರು ಮೂರು ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದುಕೊಳ್ಳುವ ಮೂಲಕ ಭಾನುವಾರ ಇತಿಹಾಸ ನಿರ್ಮಿಸಿದರು.

ಇದೇ ಮೊದಲ ಬಾರಿಗೆ ಸ್ಪ್ಯಾನಿಷ್ ಭಾಷೆಯ ಆಲ್ಬಂವೊಂದಕ್ಕೆ ಸಂಗೀತ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ದೊರಕಿದೆ. ಬನಿ ಅವರ ಸ್ಪ್ಯಾನಿಷ್ ಭಾಷೆಯ ‘ಐ ಶುಡ್ ಹ್ಯಾವ್ ಟೇಕನ್ ಮೋರ್ ಫೋಟೊಸ್’ (ನಾನು ಇನ್ನಷ್ಟು ಚಿತ್ರಗಳನ್ನು ತೆಗೆದುಕೊಳ್ಳಬೇಕಿತ್ತು) ಎಂಬ ಆಲ್ಬಂಗೆ ‘ಆಲ್ಬಂ ಆಫ್ ದಿ ಇಯರ್’ ಪ್ರಶಸ್ತಿ ದೊರಕಿದೆ.

‘ದೇವರಿಗೆ ಧನ್ಯವಾದ ತಿಳಿಸುವುದಕ್ಕೂ ಮೊದಲು ‘ಐಸಿಇ’ (ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ ಇಲಾಖೆ) ಹೊರಗೆ ಹೋಗು ಎಂದು ಹೇಳಲು ಇಚ್ಛಿಸುತ್ತೇನೆ. ನಾವೇನು ಕ್ರೂರಿಗಳಲ್ಲ. ನಾವು ಪ್ರಾಣಿಗಳಲ್ಲ. ನಾವೂ ಮನುಷ್ಯರೇ. ನಾವೂ ಅಮೆರಿಕದವರೇ’ ಎಂದು 31 ವರ್ಷ ಬನಿ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸೆ ನೀತಿಯನ್ನು ಗ್ರ್ಯಾಮಿ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಹಲವು ಕಲಾವಿದರು ವಿರೋಧಿಸಿದರು. ನಿರಂತರವಾಗಿ ವಸಾಹತುಶಾಹಿ ವ್ಯವಸ್ಥೆಯಲ್ಲಿ ಪ್ವೆಟೊ ರಿಕೊದ ಜನರು ಹೇಗೆ ವಾಸಿಸುತ್ತಿದ್ದಾರೆ ಎಂಬುದರ ಕುರಿತು ಬನಿ ಅವರು ಈ ಆಲ್ಬಂ ಹೊರತಂದಿದ್ದಾರೆ.

ಇದೇ ವೇಳೆ ಅಮೆರಿಕದ ರ್ಯಾಪರ್ ಕೆಂಡ್ರಿಕ್ ಲೆಮಾ ಅವರು ವಿವಿಧ ವಿಭಾಗಗಳಲ್ಲಿ ಒಟ್ಟು ಐದು ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದುಕೊಂಡರು.

ಭಾರತೀಯರಿಗೆ ಧಕ್ಕದ ಪ್ರಶಸ್ತಿ

‘ಗ್ಲೋಬಲ್ ಮ್ಯೂಸಿಕ್ ಪರ್ಫಾಮೆನ್ಸ್’ ವಿಭಾಗದಲ್ಲಿ ಸಿತಾರ್ ವಾದಕಿ ಭಾರತದ ಅನುಷ್ಕಾ ಶಂಕರ್ ಅವರ ‘ಚಾಪ್ಟರ್ 3: ವಿ ರಿಟರ್ನ್ ಟು ಲೈಟ್ (3ನೇ ಪಾಠ: ಬೆಳಕಿಗೆ ಮರಳಿದೆವು) ಮತ್ತು ‘ಗ್ಲೋಬಲ್ ಮ್ಯೂಸಿಕ್ ಆಲ್ಬಂ’ ವಿಭಾಗದಲ್ಲಿ ಇವರದೇ ‘ಡೇಬ್ರೇಕ್’ ಎಂಬ ಹಾಡು ನಾಮನಿರ್ದೇಶನಗೊಂಡಿದ್ದವು. ಆದರೆ ಯಾವುದಕ್ಕೂ ಪ್ರಶಸ್ತಿ ದೊರಕಲಿಲ್ಲ.

ಅನುಷ್ಕಾ ಅವರು ಪ್ರಸಿದ್ಧ ಸಿತಾರ್ ವಾದಕ ಪಂ. ರವಿ ಶಂಕರ್ ಅವರ ಮಗಳು.

‘ಗ್ಲೋಬಲ್ ಮ್ಯೂಸಿಕ್ ಆಲ್ಬಂ’ ವಿಭಾಗದಲ್ಲಿಯೇ ಭಾರತದ ಸಿದ್ಧಾರ್ಥ್ ಭಾಟಿಯಾ ಅವರ ‘ಸೌಂಡ್ಸ್ ಆಫ್ ಕುಂಭ’ ಮತ್ತು ‘ಶಕ್ತಿ’ ಎಂಬ ಮ್ಯೂಸಿಕ್ ಬ್ಯಾಂಡ್ನ ‘ಮೈಂಡ್ ಎಕ್ಸ್ಪ್ಲೋಷನ್’ ನಾಮನಿರ್ದೇಶನಗೊಂಡಿದ್ದವು. ಇವುಗಳು ಕೂಡ ಪ್ರಶಸ್ತಿ ಪಡೆದುಕೊಳ್ಳುವಲ್ಲಿ ವಿಫಲಗೊಂಡವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.