ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಯುನೆಲೆ ದಾಳಿ ಸಂಚು ವಿಫಲಗೊಳಿಸಿದ ಪಾಕ್‌ ಭದ್ರತಾ ಪಡೆ

Published : 26 ಮಾರ್ಚ್ 2024, 13:51 IST
Last Updated : 26 ಮಾರ್ಚ್ 2024, 13:51 IST
ಫಾಲೋ ಮಾಡಿ
Comments

ಕರಾಚಿ : ‍ಬಲೂಚಿಸ್ತಾನ ಪ್ರಾಂತ್ಯದಲ್ಲಿಯ ಪಾಕಿಸ್ತಾನದ ಪ್ರಮುಖ ನೌಕಾನೆಲೆ ಮೇಲೆ ದಾಳಿ ನಡೆಸಲು ಬಲೂಚ್‌ ಬಂಡುಕೋರರು ರೂಪಿಸಿದ್ದ ಸಂಚನ್ನು ಅಲ್ಲಿಯ ಭದ್ರತಾ ಪಡೆಗಳು ಸೋಮವಾರ ರಾತ್ರಿ ವಿಫಲಗೊಳಿಸಿವೆ. ಅಲ್ಲದೇ, ಭದ್ರತಾ ಪಡೆ ಮತ್ತು ಬಂಡುಕೋರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ.

ಬಲೂಚಿಸ್ತಾನದ ಪ್ರಕ್ಷುಬ್ಧ ನಗರ ಟರ್ಬಾಟ್‌ನಲ್ಲಿಯ ಪಿಎನ್‌ಎಸ್‌ ಸಿದ್ದಿಕಿ ನೌಕಾನೆಲೆ ಮೇಲೆ ಮೂರು ಕಡೆಗಳಿಂದ ದಾಳಿ ನಡೆಸಲು ಸಶಸ್ತ್ರ ಬಂಡುಕೋರರ ಪಡೆ ಸಂಚು ರೂಪಿಸಿತ್ತು. ತ್ವರಿತವಾಗಿ ಕಾರ್ಯಾಚರಣೆಗಿಳಿದ ಭದ್ರತಾ ಸಿಬ್ಬಂದಿಯು ಈ ಸಂಚು ವಿಫಲಗೊಳಿಸಿದರು ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜೊತೆಗೆ ನೌಕಾನೆಲೆಗೆ ಯಾವುದೇ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ವೇಳೆ, ಅರೆಸೇನಾಪಡೆಯ 24 ವರ್ಷ ವಯಸ್ಸಿನ ಯೋಧ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.

ಸೋಮವಾರ ಇಡೀ ರಾತ್ರಿ ಗುಂಡಿನ ಕಾಳಗ ಮತ್ತು ಸ್ಫೋಟದ ಸದ್ದು ಕೇಳಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT