ಬೀಜಿಂಗ್: ಜೈಷ್–ಎ–ಮೊಹಮ್ಮದ್ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ಕುರಿತು ಭದ್ರತಾ ಮಂಡಳಿಯಲ್ಲಿ ಅಮೆರಿಕ ನೇರವಾಗಿ ಪ್ರಸ್ತಾಪಿಸಿರುವುದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ.

ಈ ವಿಷಯದಲ್ಲಿ ಸಕಾರಾತ್ಮಕ ಪ್ರಗತಿ ಸಾಧಿಸಲಾಗಿದೆ. ಇದು ಅಮೆರಿಕಗೂ ಗೊತ್ತು ಎಂದು ಅದು ಪ್ರತಿಪಾದಿಸಿದೆ.

ಫ್ರಾನ್ಸ್ ಪ್ರಸ್ತಾವನೆಗೆ ಚೀನಾ ತಡೆ ನೀಡಿದ ಬಳಿಕ ಮಾರ್ಚ್ 27ರಂದು ಅಮೆರಿಕ ನೇರವಾಗಿ 15 ರಾಷ್ಟ್ರಗಳ ಭದ್ರತಾ ಮಂಡಳಿಯಲ್ಲಿ ಕರಡು ನಿರ್ಣಯವನ್ನು ಮಂಡಿಸಿತ್ತು.

’ಪ್ರಸ್ತುತ ಪರಿಸ್ಥಿತಿಯಲ್ಲಿ ಭದ್ರತಾ ಮಂಡಳಿಯಲ್ಲಿ ಕರಡು ನಿರ್ಣಯವನ್ನು ಒತ್ತಾಯಪೂರ್ವಕವಾಗಿ ಮಂಡಿಸಿರುವುದು ರಚನಾತ್ಮಕ ಕಾರ್ಯವಲ್ಲ. ಇದೊಂದು ಕೆಟ್ಟ ಪದ್ಧತಿ‘ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಷುವಾಂಗ್ ಸೋಮವಾರ ತಿಳಿಸಿದ್ದಾರೆ.

’ಈ ವಿಷಯಕ್ಕೆ ಸಂಬಂಧಿಸಿದಂತೆ ಪರಸ್ಪರ ಚರ್ಚಿಸಿ ಬಗೆಹರಿಸಬೇಕು ಎಂದು ಬಹುತೇಕ ರಾಷ್ಟ್ರಗಳು ಬಯಸಿವೆ. ಕಳೆದ ಶುಕ್ರವಾರವೂ ಅಮೆರಿಕದ ಕರಡು ನಿರ್ಣಯದ ಪ್ರಸ್ತಾವದ ಬಗ್ಗೆ ಭದ್ರತಾ ಮಂಡಳಿ ಸದಸ್ಯರು ಚರ್ಚಿಸಿದ್ದಾರೆ. ಕರಡು ನಿರ್ಣಯವನ್ನು ಒತ್ತಾಯದಿಂದ ಅಂಗೀಕರಿಸುವ ಇಚ್ಛೆ ಈ ರಾಷ್ಟ್ರಗಳಿಗೆ ಇಲ್ಲ. ಆದರೂ, ಅಮೆರಿಕ ಅಮೆರಿಕ ಒತ್ತಡ ಹೇರುತ್ತಿದೆ‘ ಎಂದು ಗೆಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

’ಅಮೆರಿಕದ ನಿಲುವನ್ನು ಸಮರ್ಥನೀಯವಲ್ಲ ಹಾಗೂ ಭದ್ರತಾ ಮಂಡಳಿಯ ನಿಯಮ ಮತ್ತು ಪದ್ಧತಿಗೆ ಅನುಗುಣವಾಗಿಲ್ಲ. ಅಮೆರಿಕದ ನಿಲುವಿನಿಂದ ಮಸೂದ್ಗೆ ನಿಷೇಧ ಹೇರುವ ವಿಷಯ ಜಟಿಲವಾಗಿದೆ. ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆಗೂ ಧಕ್ಕೆಯಾಗಿದೆ. ಹೀಗಾಗಿ, ಚೀನಾ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ‘ ಎಂದು ಹೇಳಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಚೀನಾ ನಾಲ್ಕು ಬಾರಿ ಮಸೂದ್ಗೆ ನಿಷೇಧಿಸುವ ಪ್ರಸ್ತಾವವನ್ನು ತಿರಸ್ಕರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.