ಢಾಕಾ: ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಹಾಗೂ 285 ಮಂದಿ ವಿರುದ್ಧ ದೇಶದ್ರೋಹ ಪ್ರಕರಣದ ಆರೋಪ ಹೊರಿಸಲು ಇಲ್ಲಿನ ನ್ಯಾಯಾಲಯವು ಜನವರಿ 21ರ ದಿನಾಂಕವನ್ನು ನಿಗದಿಪಡಿಸಿದೆ.

‘2024ರ ಡಿಸೆಂಬರ್ 24ರಂದು ಹಸೀನಾ ಹಾಗೂ ಅವಾಮಿ ಲೀಗ್ನ ನೂರಾರು ಮಂದಿ ‘ಜಾಯ್ ಆಫ್ ಬಾಂಗ್ಲಾ ಬ್ರಿಗೇಡ್’ ಹೆಸರಿನಲ್ಲಿ ವರ್ಚುವಲ್ ಸಭೆ ನಡೆಸಿ, ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವನ್ನು ಕಿತ್ತೊಗೆಯುವ ಸಂಚು ರೂಪಿಸಿದ್ದರು’ ಎಂದು ‘ಟಿಬಿಎಸ್ನ್ಯೂಸ್.ನೆಟ್’ ವರದಿ ಮಾಡಿದೆ.

ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಪ್ರಕರಣ ದಾಖಲಿಸಿದ್ದ ಸಿಐಡಿ, ಜುಲೈ 30ರಂದು ಚಾರ್ಜ್ಶೀಟ್ ದಾಖಲಿಸಿತ್ತು. ಇದರಲ್ಲಿ 286 ಮಂದಿಯನ್ನು ಆರೋಪಿಗಳು ಎಂದು ಹೆಸರಿಸಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಢಾಕಾದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಬ್ದೂಸ್ ಸಲಾಂ ಅವರು ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸಲು ಜ.21ರಂದು ಸಮಯ ನಿಗದಿಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.