ಢಾಕಾ: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ರಾಷ್ಟ್ರೀಯ ಗುರುತಿನ ಚೀಟಿಯನ್ನು ತಡೆಹಿಡಿದಿದ್ದಾಗಿ ಬಾಂಗ್ಲಾದೇಶ ಚುನಾವಣಾ ಆಯೋಗ ಬುಧವಾರ ತಿಳಿಸಿದೆ. ಹೀಗಾಗಿ ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಅವರಿಗೆ ಮತದಾನ ಮಾಡಲು ಆಗದು.
.ಶೇಖ್ ಹಸೀನಾ ಪದಚ್ಯುತಿಯಲ್ಲಿ ಜೆಯುಡಿ ಪಾತ್ರ ಇತ್ತು: ಮುಖಂಡರ ಹೇಳಿಕೆ.
‘ಯಾರದ್ದಾದ್ದರೂ ರಾಷ್ಟ್ರೀಯ ಗುರುತಿನ ಚೀಟಿಯನ್ನು (ಎನ್ಐಡಿ) ತಡೆಹಿಡಿದಿದ್ದರೆ, ಅವರು ವಿದೇಶದಿಂದ ಮತ ಚಲಾಯಿಸಲು ಆಗದು, ಹಸೀನಾ ಅವರ ಎನ್ಐಡಿಯನ್ನು ತಡೆಹಿಡಿಯಲಾಗಿದೆ’ ಎಂದು ಚುನಾವಣಾ ಆಯೋಗದ ಕಾರ್ಯದರ್ಶಿ ಅಖ್ತರ್ ಅಹಮದ್ ಹೇಳಿದ್ದಾರೆ.

ಹಸೀನಾ ಅವರ ತಂಗಿ ಶೇಖ್ ರೆಹಾನಾ, ಪುತ್ರ ಸಜೀದ್ ವಾಜೆದ್ ಜಾಯ್ ಹಾಗೂ ಮಗಳು ಸಮಿಯಾ ವಾಕೆಡ್ ಪುತುಲ್ ಅವರ ಗುರುತಿನ ಚೀಟಿಯನ್ನೂ ತಡೆಹಿಡಿಯಲಾಗಿದೆ’ ಎಂದು ಹೆಸರು ಹೇಳದ ಚುನಾವಣಾ ಅಧಿಕಾರಿಯನ್ನು ಉಲ್ಲೇಖಿಸಿ ‘ಢಾಕಾ ಟ್ರಿಬ್ಯೂನ್’ ಪತ್ರಿಕೆ ವರದಿ ಮಾಡಿದೆ.
.ಶೇಖ್ ಹಸೀನಾ ಗಡೀಪಾರಿಗೆ ಕೋರಲಾಗಿದೆ: ಬಾಂಗ್ಲಾ ವಿದೇಶಾಂಗ ಸಲಹೆಗಾರ.
ರೆಹಾನಾ ಅವರ ಮಕ್ಕಳಾದ ತುಲಿಪ್ ರಿಜ್ವಾನಾ ಸಿದ್ದೀಕ್, ಅಜ್ಮಿನಾ ಸಿದ್ದೀಕ್ ಮತ್ತು ಸೋದರಳಿಯ ರದ್ವಾನ್ ಮುಜೀಬ್ ಸಿದ್ದೀಕ್ ಬಾಬಿ, ಅವರ ಸೋದರ ಮಾವ ಮತ್ತು ಹಸೀನಾ ಅವರ ಮಾಜಿ ಭದ್ರತಾ ಸಲಹೆಗಾರ ನಿವೃತ್ತ ಮೇಜರ್ ಜನರಲ್ ತಾರಿಕ್ ಅಹ್ಮದ್ ಸಿದ್ದೀಕ್, ಅವರ ಪತ್ನಿ ಶಾಹಿನ್ ಸಿದ್ದೀಕ್ ಮತ್ತು ಅವರ ಪುತ್ರಿ ಬುಶ್ರಾ ಸಿದ್ದೀಕ್ ಅವರ ಗುರುತಿನ ಚೀಟಿಯನ್ನೂ ತಡೆ ಹಿಡಿಯಲಾಗಿದೆ ಎಂದು ವರದಿಯಾಗಿದೆ.

ನ್ಯಾಯದಿಂದ ತಪ್ಪಿಸಿಕೊಳ್ಳಲು ವಿದೇಶಕ್ಕೆ ಪಲಾಯನ ಮಾಡಿರುವುದು ಅಥವಾ ಇನ್ನಿತರ ಕಾರಣಗಳಿಂದಾಗಿ ಎನ್ಐಡಿ ಸಕ್ರಿಯವಾಗಿದ್ದರೆ, ಅವರು ಮತ ಚಲಾಯಿಸಬಹುದು ಎಂದು ಅಖ್ತರ್ ಅಹಮದ್ ತಿಳಿಸಿದ್ದಾರೆ.
.ದ್ವೇಷ ಸಾಧನೆಗೆ ನ್ಯಾಯಾಂಗದ ದುರ್ಬಳಕೆ: ಶೇಖ್ ಹಸೀನಾ ಪುತ್ರ ಸಂಜೀಬ್ ಆರೋಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.