ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಸೀನಾ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು

Published 23 ಆಗಸ್ಟ್ 2024, 14:31 IST
Last Updated 23 ಆಗಸ್ಟ್ 2024, 14:31 IST
ಅಕ್ಷರ ಗಾತ್ರ

ಢಾಕಾ: ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ಅವರ ಆಗಿನ ಸಚಿವ ಸಂಪುಟದಲ್ಲಿ ಇದ್ದ ಎಲ್ಲಾ ಸದಸ್ಯರ ರಾಜತಾಂತ್ರಿಕ ಪಾಸ್‌ಪೋರ್ಟ್‌ ಅನ್ನು ರದ್ದುಗೊಳಿಸಿದೆ.

ಮಾಜಿ ಪ್ರಧಾನಿ, ಪ್ರಧಾನಿಯ ಮಾಜಿ ಸಲಹೆಗಾರರು, ಮಾಜಿ ಕ್ಯಾಬಿನೆಟ್ ಸದಸ್ಯರು ಮತ್ತು ಇತ್ತೀಚೆಗೆ ವಿಸರ್ಜಿಸಲಾದ ರಾಷ್ಟ್ರೀಯ ಸಂಸದ್ (ಸಂಸತ್)ನ ಎಲ್ಲಾ ಸದಸ್ಯರು ಮತ್ತು ಅವರ ಸಂಗಾತಿಗಳು ಸ್ವೀಕರಿಸಿದ ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ತಕ್ಷಣವೇ ಹಿಂಪಡೆಯಲಾಗಿದೆ ಎಂದು ಗೃಹ ಸಚಿವಾಲಯದ ಭದ್ರತಾ ಸೇವೆಗಳ ವಿಭಾಗವು ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ ಎಂದು ಬಿಎಸ್ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಧಿಕಾರಿಗಳ ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ಅವರ ಅಧಿಕಾರಾವಧಿ ಮುಕ್ತಾಯದ ನಂತರ ತಕ್ಷಣವೇ ರದ್ದುಗೊಳಿಸಲಾಗುವುದು ಎಂದು ಅದು ಹೇಳಿದೆ.

ಭಾರತೀಯ ವೀಸಾ ನೀತಿಯ ಪ್ರಕಾರ, ರಾಜತಾಂತ್ರಿಕ ಅಥವಾ ಅಧಿಕೃತ ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ಬಾಂಗ್ಲಾದೇಶದ ನಾಗರಿಕರು ವೀಸಾಮುಕ್ತ ಪ್ರವೇಶ ಮತ್ತು 45 ದಿನಗಳವರೆಗೆ ದೇಶದಲ್ಲಿ ಇರಲು ಅರ್ಹರಾಗಿರುತ್ತಾರೆ ಎಂದು ‘ಡೈಲಿ ಸ್ಟಾರ್’ ಪತ್ರಿಕೆ ಹೇಳಿದೆ.

ಹಸೀನಾ ಅವರು ತಮ್ಮ ಹೆಸರಿನಲ್ಲಿ ನೀಡಲಾದ ರಾಜತಾಂತ್ರಿಕ ಪಾಸ್‌ಪೋರ್ಟ್ ಹೊರತುಪಡಿಸಿ ಯಾವುದೇ ಪಾಸ್‌ಪೋರ್ಟ್ ಹೊಂದಿಲ್ಲ. ಆಕೆಯ ರಾಜತಾಂತ್ರಿಕ ಪಾಸ್‌ಪೋರ್ಟ್ ಮತ್ತು ಅದಕ್ಕೆ ಸಂಬಂಧಿಸಿದ ವೀಸಾ ಸವಲತ್ತುಗಳನ್ನು ರದ್ದುಗೊಳಿಸುವುದರಿಂದ ಆಕೆಯನ್ನು ಹಸ್ತಾಂತರದ ಅಪಾಯಕ್ಕೆ ಸಿಲುಕಿಸಬಹುದು ಎಂದು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ಬರೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT