ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌1 ಬಿ ವೀಸಾ: ಟ್ರಂಪ್ ಕಾಯ್ದೆಗಳನ್ನು ರದ್ದುಗೊಳಿಸಿದ ಬೈಡನ್

ಅಧಿಕಾರವಹಿಸಿಕೊಂಡ ವಾರದೊಳಗೆ ಭರವಸೆ ಈಡೇರಿಸಿದ ಅಧ್ಯಕ್ಷ ಅಧ್ಯಕ್ಷ
Last Updated 28 ಜನವರಿ 2021, 10:19 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದಲ್ಲಿ ಎಚ್‌ 4 ವೀಸಾ ಹೊಂದಿರುವವರಿಗೆ ನೌಕರಿ ದೃಢೀಕರಣ (ವೃತ್ತಿಪರ ಪ್ರಮಾಣ ಪತ್ರ) ನೀಡುವ ನಿಯಮವನ್ನು ರದ್ದುಪಡಿಸಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಯಮವನ್ನು ಅಧ್ಯಕ್ಷ ಜೋ ಬೈಡನ್ ತೆಗೆದು ಹಾಕಿದ್ದಾರೆ.

ಎಚ್‌1ಬಿ ವೀಸಾ ಹೊಂದಿರುವ ನೌಕರರ ಸಂಗಾತಿಗೆ (ಪತಿ ಅಥವಾ ಪತ್ನಿ) ನೀಡುವ ಈ ಎಚ್‌4 ವೀಸಾವನ್ನು ರದ್ದುಗೊಳಿಸಿ ಹಿಂದಿನ ಟ್ರಂಪ್ ಆಡಳಿತ ಹೊಸ ನಿಯಮ ರೂಪಿಸಿತ್ತು. ಅಧಿಕಾರಕ್ಕೆ ಬಂದ ವಾರದೊಳಗೆ, ಈ ವೀಸಾ ನಿಯಮವನ್ನು ಬೈಡನ್ ರದ್ದುಗೊಳಿಸಿದ್ದಾರೆ.

ಅಮೆರಿಕದ ಪೌರತ್ವ ಮತ್ತು ವಲಸೆ ನೀತಿ ಸೇವೆಯು (ಯುಎಸ್‌ಸಿಐಸ್‌) ಎಚ್‌4 ವೀಸಾವನ್ನು ಎಚ್‌1ಬಿ ವೀಸಾ ಹೊಂದಿರುವ ನೌಕರರ ಸಂಗಾತಿ ಅಥವಾ 21 ವರ್ಷದ ಕೆಳಗಿನ ಮಕ್ಕಳಿಗೆ ನೀಡಲಾಗುತ್ತದೆ. ಸದ್ಯ ಅಮೆರಿಕದಲ್ಲಿ ಈ ವೀಸಾ ಪಡೆದಿರುವರಲ್ಲಿ ಭಾರತೀಯ ಐಟಿ ವೃತ್ತಿಪರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಎಚ್‌1ಬಿ ವೀಸಾ ವಲಸೆ ರಹಿತ ವೀಸಾ ಆಗಿದೆ. ತಾತ್ವಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಕೌಶಲ ಹೊಂದಿರುವ ವಿದೇಶಿ ನೌಕರರನ್ನು ನೇಮಿಸಿಕೊಳ್ಳಲು ಅಮೆರಿಕದ ಕಂಪನಿಗಳಿಗೆ ಅವಕಾಶ ನೀಡುತ್ತದೆ. ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿವರ್ಷ ಹಲವು ಉದ್ಯೋಗಿಗಳು ಈ ವೀಸಾ ಮೂಲಕ ಉದ್ಯೋಗ ಪಡೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT