ವಾಷಿಂಗ್ಟನ್: ‘ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರೆ ಹವಾಮಾನ ಬದಲಾವಣೆ ವಿರುದ್ಧ ಹೋರಾಟಕ್ಕಾಗಿ ವಿವಿಧ ದೇಶಗಳು ಮಾಡಿಕೊಂಡಿರುವ ಐತಿಹಾಸಿಕ ‘ಪ್ಯಾರಿಸ್ ಒಪ್ಪಂದ’ದಲ್ಲಿ ಅಮೆರಿಕವನ್ನು ಮರು ಸೇರ್ಪಡೆ ಮಾಡುತ್ತೇನೆ’ ಎಂದು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೊ ಬೈಡನ್ ಭರವಸೆ ನೀಡಿದ್ದಾರೆ

ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿದಿದ್ದಾರೆ. ಮಿತ್ರ ರಾಷ್ಟ್ರಗಳ ಜತೆಗೂ ಉತ್ತಮ ಬಾಂಧವ್ಯ ಉಳಿಸಿಕೊಂಡಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಪ್ಯಾರಿಸ್ ಒಪ್ಪಂದದಲ್ಲಿ ಅಮೆರಿಕವನ್ನು ಮರುಸೇರ್ಪಡೆಗೊಳಿಸುವ ಜತೆಗೆ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಹೊಸ ಮಾನದಂಡಗಳನ್ನು ರೂಪಿಸಲು ಪ್ರಯತ್ನಿಸುತ್ತೇನೆ’ ಎಂದು ಬೈಡನ್ ತಿಳಿಸಿದ್ದಾರೆ. ‘ಕೊರೊನಾದಂತೆ ಹವಾಮಾನ ಬದಲಾವಣೆ ಕೂಡ ಇಡೀ ಜಗತ್ತಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅಮೆರಿಕದ ನಾಯಕತ್ವದಲ್ಲೇ ಇದನ್ನು ಎದುರಿಸಬೇಕಿದೆ’ ಎಂದೂ ಬೈಡನ್ ತಿಳಿಸಿದ್ದಾರೆ.

ಟ್ರಂಪ್ ಭಿನ್ನ ರಾಗ: ಹವಾಮಾನ ಬದಲಾವಣೆ ಬಗ್ಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾಳ್ಗಿಚ್ಚಿನಿಂದ ಹಾನಿಗೊಳಗಾಗಿದ್ದ ಕ್ಯಾಲಿಫೋರ್ನಿಯಾದ ಪ್ರದೇಶಗಳಿಗೆ ಭೇಟಿ ನೀಡಿದ್ದ ಟ್ರಂಪ್, ‘ವಿಜ್ಞಾನದಿಂದ ಎಲ್ಲವೂ ತಿಳಿಯಲಿದೆ ಎಂದು ನಾನು ಭಾವಿಸುವುದಿಲ್ಲ’ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸುತ್ತಾ ಟ್ರಂಪ್ ವಿರುದ್ಧ ಹರಿಹಾಯ್ದಿರುವ ಜೊ ಬೈಡನ್, ‘ಇನ್ನೂ ನಾಲ್ಕು ವರ್ಷ ಹವಾಮಾನ ಬದಲಾವಣೆಯನ್ನು ನಿರಾಕರಿಸುತ್ತಾಶ್ವೇತಭವನದಲ್ಲಿ ಕುಳಿತುಕೊಂಡರೆ ಅಮೆರಿಕದ ಬಹುಪಾಲು ಭಾಗವು ನೀರಿನಲ್ಲಿ ಮುಳುಗಿಹೋಗದಿರದು. ಆಗ ಇದನ್ನು ಕಂಡು ಯಾರಿಗೂ ಅಚ್ಚರಿಯೂ ಆಗದು. ವಿಜ್ಞಾನವನ್ನು ಗೌರವಿಸುವ ಹಾಗೂ ಹವಾಮಾನ ಬದಲಾವಣೆಯಿಂದ ಈಗಾಗಲೇ ಆಗಿರುವ ಹಾನಿಯ ಬಗ್ಗೆ ಅರಿವಿರುವ ಅಧ್ಯಕ್ಷರು ನಮಗೆ ಬೇಕಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.