ವಾಷಿಂಗ್ಟನ್: ಬಿಸ್ರಿ ಅಣೆಕಟ್ಟು ಯೋಜನೆ ಸಲುವಾಗಿ ಸಾಲದ ಬೇಡಿಕೆ ಇಟ್ಟಿದ್ದ ಲೆಬನಾನ್ ಸರ್ಕಾರ, ಪೂರ್ವಭಾವಿ ಷರತ್ತುಗಳನ್ನು ಪೂರೈಸಲು ವಿಫಲವಾದ ಕಾರಣ ₹ 16 ಸಾವಿರ ಕೋಟಿ (224 ಮಿಲಿಯನ್ ಡಾಲರ್) ಸಾಲ ನೀಡಲು ವಿಶ್ವಬ್ಯಾಂಕ್ ನಿರಾಕರಿಸಿದೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ವಿಶ್ವಬ್ಯಾಂಕ್, ‘ನೀರು ಸರಬರಾಜು ಹೆಚ್ಚಿಸುವ (ಬಿಸ್ರಿ ಅಣೆಕಟ್ಟು) ಯೋಜನೆ ಅಡಿಯಲ್ಲಿ ಲೆಬನಾನ್ ಸರ್ಕಾರ ಕೇಳಿದ್ದ ಸಾಲವನ್ನು ರದ್ದುಪಡಿಸಲಾಗಿದೆ. ಅಣೆಕಟ್ಟು ನಿರ್ಮಾಣ ಆರಂಭಕ್ಕೂ ಮೊದಲು ಷರತ್ತುಗಳನ್ನು ಪೂರೈಸಲು ವಿಫಲವಾಗಿರುವುದರಿಂದ ಈ ನಿರ್ಧಾರ ಕೈಗೊಂಡಿದ್ದು, ಇದನ್ನು ಲೆಬನಾನ್‌ಗೆ ತಿಳಿಸಲಾಗಿದೆ’ ಎಂದು ಪ್ರಕಟಿಸಿದೆ.

‘224 ಮಿಲಿಯನ್ ಡಾಲರ್ ಸಾಲ ರದ್ದು ಪಡಿಸಲಾಗಿದ್ದು, ಇದು ತಕ್ಷಣವೇ ಜಾರಿಯಾಗಲಿದೆ’ ಎಂದು ಹೇಳಿದೆ.

ಪರಿಸರ ಪರಿಹಾರ ಯೋಜನೆ ಮತ್ತು ಅಣೆಕಟ್ಟು ಯೋಜನೆಯ ಷರತ್ತು ಮತ್ತು ಕಾಮಗಾರಿ ಗುತ್ತಿಗೆದಾರರನ್ನು ಸಜ್ಜುಗೊಳಿಸಲು ನೀಡಲಾಗಿದ್ದ ಶುಕ್ರವಾರದ ಗಡುವನ್ನು ಪೂರೈಸಲು ಲೆಬನಾನ್ ವಿಫಲವಾಗಿದೆ. ಮಾತ್ರವಲ್ಲದೆ ಕಾಮಗಾರಿ ಆರಂಭ ಮತ್ತು ನಿರ್ವಹಣೆ ವ್ಯವಸ್ಥೆಯನ್ನು ಆಗಸ್ಟ್ 24ರೊಳಗೆ ಅಂತಿಮಗೊಳಿಸಲೂ ಲೆಬನಾನ್‌ಗೆ ಸಾಧ್ಯವಾಗಿರಲಿಲ್ಲ ಎಂದೂ ಉಲ್ಲೇಖಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.