ಬರ್ಲಿನ್ (ಎಎಫ್ಪಿ): ಫ್ರಾಂಕ್ಫರ್ಟ್ ನಗರದಲ್ಲಿ ಎರಡನೇ ಮಹಾ ಯುದ್ಧ ಕಾಲದ ಎರಡು ಸಜೀವ ಬಾಂಬ್ಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಸ್ಸೆ ರಾಜ್ಯದ ಗೀಸೆನ್ ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ 250 ಕೆ.ಜಿ.ಯ ಜರ್ಮನಿ ಬಾಂಬ್ ಮತ್ತು 50 ಕೆ.ಜಿ.ಯ ಅಮೆರಿಕದ ಬಾಂಬ್ ಪತ್ತೆಯಾಗಿದೆ. ಈ ಪ್ರದೇಶದ2,500 ಮಂದಿಯನ್ನು ಸ್ಥಳಾಂತರಿಸಿ,ಬಾಂಬ್ ನಿಷ್ಕ್ರಿಯಗೊಳಿಸಲಾಯಿತು. ಅಮೆರಿಕದ ಬಾಂಬ್ ಅನ್ನು ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸಲಾಗಿದೆ. ಜರ್ಮನ್ ಬಾಂಬ್ ಅನ್ನು ನಿಷ್ಕ್ರೀಯಗೊಳಿಸುವುದು ಸಾಧ್ಯವಾಗದ ಕಾರಣ ಅದನ್ನು ಸ್ಫೋಟಿಸಲಾಯಿತು.

ಮಹಾಯುದ್ಧ ಅಂತ್ಯ ಗೊಂಡು 75 ವರ್ಷಗಳಾದರೂ, ಜರ್ಮನಿಯಲ್ಲಿ ಬಾಂಬ್ ಮತ್ತು ಸ್ಫೋ ಟಕಗಳು ಪತ್ತೆಯಾಗುತ್ತಲೇ ಇವೆ. ಯುದ್ಧ ಸಂದರ್ಭದಲ್ಲಿ ಜರ್ಮನಿ ಮೇಲೆ ನಡೆಸಿದ ಬಾಂಬ್ ದಾಳಿಯಲ್ಲಿಶೇ 10ರಷ್ಟು ಸ್ಫೋಟಗೊಂಡಿಲ್ಲ ಎಂಬುದು ತಜ್ಞರ ಅಭಿಪ್ರಾಯ.ಈ ತಿಂಗಳ ಆರಂಭದಲ್ಲಿ ಕಟ್ಟಡ ಕಾಮಗಾರಿ ಸಂದರ್ಭದಲ್ಲಿ100 ಕೆ.ಜಿ.ಯ ಅಮೆರಿಕದ ಬಾಂಬ್ ಪತ್ತೆಯಾಗಿತ್ತು. 3 ಸಾವಿರ ಮಂದಿಯನ್ನು ಸ್ಥಳಾಂತರಿಸಿ ಅದನ್ನು ನಿಷ್ಕ್ರೀಯಗೊಳಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.