ಬ್ರೆಸಿಲಿಯಾ: ಭಾರತದಲ್ಲಿ ತಯಾರಿಸಲಾದ ಕೊರೊನಾ ವೈರಸ್ ಲಸಿಕೆಗಳ ರಫ್ತಿಗೆ ಯಾವುದೇ ನಿರ್ಬಂಧ ಹೇರಲಾಗಿಲ್ಲ. ಅಲ್ಲದೆ ಜನವರಿ ತಿಂಗಳಲ್ಲಿ ಆಮದು ಮಾಡಿಕೊಳ್ಳುವ ಯೋಜನೆ ಇರಿಸಿಕೊಳ್ಳಲಾಗಿದೆ ಎಂದು ಬ್ರೆಜಿಲ್ ಸರಕಾರ ತಿಳಿಸಿದೆ.

ಇದರೊಂದಿಗೆ ವಿದೇಶಕ್ಕೆ ಕೋವಿಡ್-19 ಲಸಿಕೆ ರಫ್ತಿಗೆ ಭಾರತ ಯಾವುದೇ ನಿರ್ಬಂಧ ಹೇರಿಲ್ಲ ಎಂಬುದು ತಿಳಿದು ಬಂದಿದೆ. ಅಲ್ಲದೆ ಶೀಘ್ರದಲ್ಲೇ 'ಮೇಡ್ ಇನ್ ಇಂಡಿಯಾ' ಕೋವಿಡ್-19 ಲಸಿಕೆ ವಿದೇಶಕ್ಕೂ ರಫ್ತುಗೊಳ್ಳಲಿದೆ.

ಈ ಸಂಬಂಧ ಬ್ರೆಜಿಲ್ ವಿದೇಶಾಂಗ ಸಚಿವಾಲಯ ಮತ್ತು ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಲಾದ ಜಂಟಿ ಪ್ರಕಟಣೆಯಲ್ಲಿ, ಆಸ್ಟ್ರಾಜೆನೆಕಾ ಲಸಿಕೆಯ ರಫ್ತು ಮಾಡಲು ಬ್ರೆಜಿಲ್ ಫಿಯೋಕ್ರೂಜ್ ಬಯೋಮೆಡಿಕಲ್ ಸೆಂಟರ್ ಮತ್ತು ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ನಡುವಣ ಮಾತುಕತೆ ಪ್ರಗತಿಯಲ್ಲಿದ್ದು, ಜನವರಿ ಎರಡನೇ ವಾರದಲ್ಲಿ ಲಸಿಕೆ ವಿತರಿಸುವ ನಿರೀಕ್ಷೆಯಿದೆ ಎಂದು ಹೇಳಿದೆ.

ಇದನ್ನೂ ಓದಿ:ಕೋವಿಡ್| ಗಣರಾಜ್ಯೋತ್ಸವಕ್ಕಾಗಿ ಕೈಗೊಂಡಿದ್ದ ಭಾರತ ಭೇಟಿ ರದ್ದುಗೊಳಿಸಿದ ಜಾನ್ಸನ್

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನೆಕಾ ಸಂಸ್ಥೆಗಳು ಕೋವಿಶೀಲ್ಡ್ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಹೊಸ ವರ್ಷದಲ್ಲಿ ಜನವರಿ 3ರಂದು ಭಾರತದಲ್ಲಿ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿತ್ತು.

ಜುಲೈ ವೇಳೆಗೆ 30 ಕೋಟಿ ಜನರಿಗೆ ವಿತರಿಸುವ ಗುರಿಯನ್ನು ಭಾರತ ಹೊಂದಿದೆ. ಇದು ಜಗತ್ತಿನಲ್ಲೇ ಅತಿ ದೊಡ್ಡ ಲಸಿಕೆ ವಿತರಣೆಗಳಲ್ಲಿ ಒಂದಾಗಿ ಗುರುತಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.