ನವದೆಹಲಿ:ಎಲ್ಲಾ ದೇಶಗಳ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಲುಬದ್ಧತೆ ವ್ಯಕ್ತಪಡಿಸಿದ‘ಬ್ರಿಕ್ಸ್’ ನಾಯಕರು, ಉಕ್ರೇನ್ ಬಿಕ್ಕಟ್ಟು ಮತ್ತು ಅಫ್ಘಾನಿಸ್ತಾನ ಸಮಸ್ಯೆಗಳ ಶಾಂತಿಯುತ ಪರಿಹಾರಕ್ಕೆ ಒತ್ತು ನೀಡುವುದಾಗಿ ಘೋಷಿಸಿದರು.

ವಿಶ್ವದ ಐದು ದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾವನ್ನು ಒಳಗೊಂಡಿರುವ ‘ಬ್ರಿಕ್ಸ್’ನ ಎರಡು ದಿನಗಳ ಶೃಂಗಸಭೆ ವರ್ಚುವಲ್ ಆಗಿ ಗುರುವಾರ ಬೀಜಿಂಗ್‌ನಲ್ಲಿ ಆರಂಭಗೊಂಯಿತು.

ರಷ್ಯಾ ಮತ್ತು ಉಕ್ರೇನ್ ನಡುವಿನ ಮಾತುಕತೆಗಳನ್ನು ಬ್ರಿಕ್ಸ್‌ನ ನಾಯಕರು ಬೆಂಬಲಿಸಿದರು. ಪೂರ್ವ ಯುರೋಪ್ ಮತ್ತು ಸುತ್ತಮುತ್ತಲಿನ ಮಾನವೀಯ ಪರಿಸ್ಥಿತಿಯ ಬಗ್ಗೆ ನಾಯಕರು ಈ ವೇಳೆ ಕಳವಳ
ವ್ಯಕ್ತಪಡಿಸಿದರು.

ಜಾಗತಿಕ ಆರ್ಥಿಕ ಚೇತರಿಕೆಗೆ ಸಹಕರಿಸಿ:‘ಬ್ರಿಕ್ಸ್’ ಸದಸ್ಯ ರಾಷ್ಟ್ರಗಳಪರಸ್ಪರ ಸಹಕಾರವು ಕೋವಿಡ್ ನಂತರ ಜಾಗತಿಕ ಆರ್ಥಿಕ ಚೇತರಿಕೆಗೆ ಉಪಯುಕ್ತ ಕೊಡುಗೆ ನೀಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕೆಲವು ವರ್ಷಗಳಲ್ಲಿ ಬ್ರಿಕ್ಸ್‌ನಲ್ಲಿ ಕೈಗೊಂಡ ರಚನಾತ್ಮಕ ಬದಲಾವಣೆಗಳು ಗುಂಪಿನ ಪ್ರಭಾವವನ್ನು ಹೆಚ್ಚಿಸಿವೆ. ಸದಸ್ಯ ರಾಷ್ಟ್ರಗಳ ನಡುವಿನ ಸಹಕಾರವು ಅವರ ನಾಗರಿಕರಿಗೆ ಪ್ರಯೋಜನ ತಂದಿದೆ. ಶೃಂಗದಲ್ಲಿ ನಡೆಯುವ ಚರ್ಚೆಗಳು ಸದಸ್ಯ ದೇಶಗಳ ನಡುವಿನ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತವೆ ಎಂಬ ವಿಶ್ವಾಸವಿದೆ ಎಂದರು.

ಎರಡು ದಿನಗಳ ವರ್ಚುವಲ್ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಬ್ರೆಜಿಲ್ ಅಧ್ಯಕ್ಷಜೈರ್ ಬೊಲ್ಸೊನಾರೊ ಮತ್ತು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಭಾಗವಹಿಸಿದ್ದರು.

ವಿಶ್ವಸಂಸ್ಥೆ ಸುಧಾರಣೆ ಅಗತ್ಯ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಒಳಗೊಂಡಂತೆ ವಿಶ್ವಸಂಸ್ಥೆಯ ಸಮಗ್ರ ಸುಧಾರಣೆಯ ಅಗತ್ಯವನ್ನುಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬ್ರಿಕ್ಸ್ ರಾಷ್ಟ್ರಗಳ ನಾಯಕರು ಒತ್ತಿಹೇಳಿದರು. ಭದ್ರತಾ ಮಂಡಳಿಯಲ್ಲಿ ಪ್ರಾತಿನಿಧಿತ್ವವನ್ನು ಹೆಚ್ಚಿಸುವ ಮೂಲಕ ಮಂಡಳಿ ಕಾರ್ಯವನ್ನು ದಕ್ಷ ಮತ್ತು ಪರಿಣಾಮಕಾರಿಯನ್ನಾಗಿಸಬೇಕಿದೆ ಎಂದರು.

ವಿಶ್ವಸಂಸ್ಥೆಯಲ್ಲಿ ಭಾರತ, ಬ್ರೆಜಿಲ್, ದಕ್ಷಿಣ ಆಫ್ರಿಕಾಕ್ಕೆ ಹೆಚ್ಚಿನ ಸ್ಥಾನಮಾನ ಮತ್ತು ಪ್ರಾಮುಖ್ಯತೆ ದೊರೆಯಬೇಕು ಎಂಬುದಕ್ಕೆ ರಷ್ಯಾ ಮತ್ತು ಚೀನಾ ಸಹಮತ ವ್ಯಕ್ತಪಡಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.