ಬೀಜಿಂಗ್: ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಉಂಟಾದ ಹಠಾತ್ ಪ್ರವಾಹದಿಂದಾಗಿ ಸೇತುವೆ ಕುಸಿದು ಕನಿಷ್ಠ ಇಬ್ಬರು ಮೃತಪಟ್ಟು 12 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಯಾನ್-ಕಾಂಗ್ಡಿಂಗ್ ಎಕ್ಸ್‌ಪ್ರೆಸ್‌ವೇಯ ಕಾಂಗ್ಡಿಂಗ್ ನಗರ ಮತ್ತು ಲುಡಿಂಗ್ ಕೌಂಟಿ ನಡುವಿನ ವಿಭಾಗದಲ್ಲಿ ಶನಿವಾರ ಮುಂಜಾನೆ 3:30ರ ಸುಮಾರಿಗೆ ಸೇತುವೆ ಕುಸಿದಿದೆ. ಆರು ಜನರಿದ್ದ ಮೂರು ವಾಹನಗಳು ಕಮರಿಗೆ ಬಿದ್ದಿವೆ ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ಕ್ಸಿನ್‌ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ನಾಪತ್ತೆಯಾದ 12 ಮಂದಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.