ಲಂಡನ್: ಕನ್ಸರ್ವೇಟಿವ್ ಪಕ್ಷದ ಸರ್ಕಾರವು ತಮ್ಮನ್ನು 2020ರ ಫೆಬ್ರುವರಿಯಲ್ಲಿ ಸಚಿವ ಸ್ಥಾನದಿಂದ ವಜಾಗೊಳಿಸಿದೆ. ಮುಸ್ಲಿ ಧರ್ಮದಲ್ಲಿ ತಮಗೆ ಇದ್ದ ನಂಬಿಕೆಯೇ ಇದಕ್ಕೆ ಕಾರಣ ಎಂದು ಪಾಕಿಸ್ತಾನ ಮೂಲದ ಬ್ರಿಟನ್ ಸಂಸದೆಯೊಬ್ಬರು ಭಾನುವಾರ ಆರೋಪಿಸಿದ್ದಾರೆ.

2018ರ ಮಾಜಿ ಪ್ರಧಾನಿ ತೆರೆಸಾ ಮೇ ಅವರ ಆಡಳಿತದಲ್ಲಿ ಬ್ರಿಟನ್‌ನ ಸಾರಿಗೆ ಇಲಾಖೆಯಲ್ಲಿ ಕಿರಿಯ ಸಚಿವಾಲಯದ ಹುದ್ದೆಯೊಂದಕ್ಕೆ ನುಸ್ರತ್ ಘನಿ (49) ಅವರನ್ನು ನೇಮಿಸಲಾಗಿತ್ತು. ಆದರೆ 2020ರ ಫೆಬ್ರುವರಿಯಲ್ಲಿ ಬಂದ ಪ್ರಧಾನಿ ಬೋರಿಸ್ ಜಾನ್ಸನ್‌ರ ಸರ್ಕಾರದ ಪುನರ್‌ರಚನೆಯಲ್ಲಿ ನುಸ್ರತ್ ಅವರು ಸಚಿವ ಸ್ಥಾನದಿಂದ ವಂಚಿತರಾಗಬೇಕಾಯಿತು. ತಮಗೆ ಮುಸ್ಲಿಂ ಧರ್ಮದ ಮೇಲಿದ್ದ ನಂಬಿಕೆಯ ಕಾರಣದಿಂದ ಈ ಕ್ರಮ ಕೈಗೊಳ್ಳಲಾಯಿತು ಎಂದು ದಿ ಸಂಡೇ ಟೈಮ್ಸ್ ಪತ್ರಿಕೆಗೆ ನುಸ್ರತ್ ಹೇಳಿದ್ದಾರೆ.

‘ನನ್ನನ್ನು ವಜಾಗೊಳಿಸಿದ್ದರ ಹಿಂದಿನ ಕಾರಣವನ್ನು ನಾನು ಕೇಳಿದೆ. ಮುಸ್ಲಿ ಧರ್ಮದ ಮೇಲಿನ ನನ್ನ ನಂಬಿಕೆಯೇ ಮುಖ್ಯ ಸಮಸ್ಯೆಯಾಗಿ ಪ್ರಸ್ತಾಪವಾಯಿತು ಎಂದು ನನಗೆ ತಿಳಿಸಲಾಯಿತು. ನಾನು ಮುಸ್ಲಿಂ ಸಚಿವೆ ಆಗಿರುವುದು ಅನೇಕ ನನ್ನ ಸಹೋದ್ಯೋಗಿಗಳಿಗೆ ಮುಜುಗರವನ್ನುಂಟು ಮಾಡಿದೆ. ನಾನು ಪಕ್ಷಕ್ಕೆ ನಿಷ್ಠಳಾಗಿಲ್ಲ ಎಂದು ಹೇಳಲಾಗಿದೆ’ ಎಂದು ನುಸ್ರತ್ ಘನಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಕನ್ಸರ್ವೇಟಿವ್ ಪಕ್ಷದ ಮುಖ್ಯ ಸಚೇತಕ ಮಾರ್ಕ್ ಸ್ಪೆನ್ಸರ್, ‘ನುಸ್ರತ್ ಘನಿ ಅವರ ಆರೋಪಗಳು ಸಂಪೂರ್ಣ ಸುಳ್ಳು’ ಎಂದು ಟ್ವೀಟ್‌ನಲ್ಲಿ ಹೇಳಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.