ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮತೃಷೆಗಾಗಿ 42 ನಾಯಿಗಳ ಮೇಲೆ ಅತ್ಯಾಚಾರ ಎಸಗಿದ್ದ ಪ್ರಾಣಿ ತಜ್ಞನ ಬಂಧನ!

Published 27 ಸೆಪ್ಟೆಂಬರ್ 2023, 7:36 IST
Last Updated 27 ಸೆಪ್ಟೆಂಬರ್ 2023, 7:36 IST
ಅಕ್ಷರ ಗಾತ್ರ

ಲಂಡನ್: ಬ್ರಿಟನ್‌ನ ಪ್ರಾಣಿ ತಜ್ಞನೊಬ್ಬ ಡಜನ್‌ಗಟ್ಟಲೆ ನಾಯಿಗಳ ಮೇಲೆ ಅತ್ಯಾಚಾರವಸೆಗಿ ಅದನ್ನು ಚಿತ್ರೀಕರಿಸಿದ ಪೈಶಾಚಿಕ ಕೃತ್ಯ ಇದೀಗ ಬಯಲುಗೊಂಡಿದ್ದು, ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.

ಆ್ಯಡಮ್ ಬ್ರಿಟ್ಟಾನ್ ಎಂಬ ಪ್ರಾಣಿ ತಜ್ಞ ಬಿಬಿಸಿ ಮತ್ತು ನ್ಯಾಷನಲ್ ಜಿಯಾಗ್ರಾಫಿಕ್ ಚಾಲನ್‌ನೊಂದಿಗೆ ಕೆಲಸ ಮಾಡಿದ್ದ. ವಿಕೃತ ಮನಸ್ಸಿನವನಾದ ಈತ ಡಜನ್‌ಗಟ್ಟಲೆ ನಾಯಿಗಳ ಮೇಲೆ ಅವು ಸಾಯುವವರೆಗೂ ಅತ್ಯಾಚಾರವೆಸಗಿದ್ದಾನೆ. ಅವುಗಳನ್ನು ಚಿತ್ರೀಕರಿಸಿ ಅಂತರ್ಜಾಲ ತಾಣದಲ್ಲಿ ಹಂಚಿಕೊಂಡಿದ್ದಾನೆ ಎಂದು ಆಸ್ಟ್ರೇಲಿಯಾದ ನ್ಯಾಯಾಲಯ ಹೇಳಿರುವುದನ್ನು ಬಿಬಿಸಿ ವರದಿ ಮಾಡಿದೆ.

ಈ ಪ್ರಕರಣದ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಮಂಡಿಸಲಾದ ವಿಡಿಯೊ ಸಾಕ್ಷ್ಯಗಳನ್ನು ವೀಕ್ಷಿಸುವುದು ಅಸಾಧ್ಯ. ಇದನ್ನು ನೋಡುವವರು ಮಾನಸಿಕ ಆಘಾತಕ್ಕೊಳಗಾಗುವ ಸಾಧ್ಯತೆ ಇದೆ ಎಂದು ನ್ಯಾಯಾಲಯದಲ್ಲಿದ್ದವರನ್ನು ನ್ಯಾಯಾಧೀಶರು ಹೊರಕ್ಕೆ ಕಳುಹಿಸಿದ್ದಾರೆ.

ವಿಕೃತ ಕಾಮಾಸಕ್ತಿ ಹೊಂದಿದ್ದ ಬ್ರಿಟ್ಟಾನ್‌, 2014ರಿಂದಲೇ ತನ್ನ ಸಾಕು ಪ್ರಾಣಿಗಳ ಮೇಲೆ ಹಾಗೂ ಈತನ ಬಳಿ ಬಿಡುತ್ತಿದ್ದ ಇತರರ ನಾಯಿಗಳ ಮೇಲೆ ಅತ್ಯಾಚಾರ ಎಸಗುವುದನ್ನು ಪ್ರಾರಂಭಿಸಿದ್ದ. ಕೆಲಸದ ಒತ್ತಡ ಹಾಗೂ ಪ್ರಯಾಣದ ಸಂದರ್ಭದಲ್ಲಿ ಈತನ ಬಳಿ ತಮ್ಮ ಸಾಕು ಪ್ರಾಣಿಗಳನ್ನು ಹಲವರು ಬಿಟ್ಟು ಹೋಗುತ್ತಿದ್ದರು. ಇವುಗಳನ್ನು ಶಿಪ್ ಕಂಟೈನರ್‌ನಲ್ಲಿ ತನ್ನ ಕಾಮತೃಷೆ ತೀರಿಸಿಕೊಳ್ಳಲು ಈತ ಬಳಸಿಕೊಳ್ಳುತ್ತಿದ್ದ. ಇದನ್ನು ಆತ ‘ಹಿಂಸೆಯ ಕೊಠಡಿ’ ಎಂದು ಕರೆಯುತ್ತಿದ್ದ ಎಂದು ಸರ್ಕಾರಿ ವಕೀಲರು ಆತನ ವಿರುದ್ಧ ಆರೋಪಿಸಿದ್ದಾರೆ.

ಪ್ರಾಣಿ ವಿಜ್ಞಾನ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿರುವ ಬ್ರಿಟ್ಟಾನ್‌ 2022ರಲ್ಲಿ ಬಂಧನಕ್ಕೊಳಗಾಗಿದ್ದ. ಆಸ್ಟ್ರೇಲಿಯಾದ ಉತ್ತರ ವಲಯದ ಪೊಲೀಸರು ಈತನನ್ನು ಬಂಧಿಸಿ, ಅವನ ಬಳಿ ಇದ್ದ ಕ್ಯಾಮೆರಾ ಹಾಗೂ ವಿಡಿಯೊಗಳನ್ನು ವಶಪಡಿಸಿಕೊಂಡಿದ್ದರು. ಬಂಧನಕ್ಕೆ 18 ತಿಂಗಳು ಮೊದಲು ಈತ ಒಟ್ಟು 42 ನಾಯಿಗಳ ಮೇಲೆ ಅತ್ಯಾಚಾರವೆಸಗಿದ್ದ. ಇದರಲ್ಲಿ 39 ನಾಯಿಗಳು ಮೃತಪಟ್ಟಿವೆ. 

ಬ್ರಿಟ್ಟಾನ್ ತನ್ನ ತಪ್ಪನ್ನು ನ್ಯಾಯಾಧೀಶರ ಮುಂದೆ ಒಪ್ಪಿಕೊಂಡಿದ್ದಾನೆ. ಈತನಿಗೆ ಬರುವ ಡಿಸೆಂಬರ್‌ನಲ್ಲಿ ಶಿಕ್ಷೆ ಪ್ರಕಟವಾಗಲಿದೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT