ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಲಘು ವಿಮಾನ ಪತನ: 6 ಸಾವು

Published 9 ಜುಲೈ 2023, 5:48 IST
Last Updated 9 ಜುಲೈ 2023, 5:48 IST
ಅಕ್ಷರ ಗಾತ್ರ

ಕ್ಯಾಲಿಫೋರ್ನಿಯಾ: ಅಮೆರಿಕದಲ್ಲಿ ಲಘು ವಿಮಾನ ಪತವಾಗಿದ್ದು 6 ಜನರು ಸಾವನ್ನಪ್ಪಿದ್ದಾರೆ.

ಮುರಿಯೇಟಾ ವಿಮಾನ ನಿಲ್ದಾಣದ ಬಳಿ ಬೆಳಗ್ಗೆ 4.15ಕ್ಕೆ ಪತನವಾಗಿದೆ ಎಂದು ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ. ಪೈಲಟ್‌ ಸೇರಿದಂತೆ ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ.

ನಾಗರಿಕ ವಿಮಾನಯಾನ ಒಕ್ಕೂಟಕ್ಕೆ ಸೇರಿದ್ದ ಸೆಸ್ನಾ ಸಿ550 ಲಘು ವಿಮಾನ ಲಾಸ್‌ ವೇಗನ್‌ನಿಂದ ಕ್ಯಾಲಿಫೋರ್ನಿಯಾ ಕಡೆಗೆ ತೆರಳುತ್ತಿತ್ತು. ತಾಂತ್ರಿಕ ಕಾರಣಗಳಿಂದಾಗಿ ಮುರಿಯೇಟಾ ವಿಮಾನ ನಿಲ್ದಾಣದ ಬಳಿ ಪತನವಾಗಿದೆ. 

ವಿಮಾನ ಪತನಗೊಂಡಿದ್ದರಿಂದ ಸಂಭವಿಸಿದ ಬೆಂಕಿಯಿಂದಾಗಿ ಒಂದು ಎಕರೆಯಲ್ಲಿದ್ದ ಗಿಡ ಮರಗಳು ಸುಟ್ಟು ಭಸ್ಮವಾಗಿವೆ. ವಿಮಾನದಲ್ಲಿದ್ದವರು ಸುಟ್ಟು ಕರಕಲಾಗಿದ್ದು ಅವರ ಗುರುತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಎರಡು ಎಂಜಿನ್‌ಗಳನ್ನು ಹೊಂದಿದ್ದ ಈ ವಿಮಾನದ ಪತನ ಕುರಿತು ಅಧಿಕಾರಿಗಳು ತನಿಖೆಗೆ ಆದೇಶ ಮಾಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT