ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗಪುರ, ಕ್ವಾಲಾಲಂಪುರಕ್ಕೆ ರಾಜತಾಂತ್ರಿಕರ ಸ್ಥಳಾಂತರಿಸಿದ ಕೆನಡಾ

ಅ.10ರ ಒಳಗಾಗಿ ವಾಪಸು ಕರೆಸಿಕೊಳ್ಳಲು ಗಡುವು ನೀಡಿದ್ದ ಭಾರತ
Published 6 ಅಕ್ಟೋಬರ್ 2023, 11:32 IST
Last Updated 6 ಅಕ್ಟೋಬರ್ 2023, 11:32 IST
ಅಕ್ಷರ ಗಾತ್ರ

ಟೊರಂಟೊ: ರಾಜತಾಂತ್ರಿಕರನ್ನು ವಾಪಸ್‌ ಕರೆ‌ಸಿಕೊಳ್ಳುವಂತೆ ಭಾರತ ನೀಡಿದ್ದ ಗಡುವು ಸಮೀಪಿಸುತ್ತಿರುವಂತೆಯೇ, ತನ್ನ ಬಹುತೇಕ ರಾಜತಾಂತ್ರಿಕರನ್ನು ಸಿಂಗಪುರ ಇಲ್ಲವೇ ಕ್ವಾಲಾಲಂಪುರಕ್ಕೆ ಕೆನಡಾ ಸ್ಥಳಾಂತರಿಸಿದೆ ಎಂದು ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ.

‘ದೆಹಲಿ ಹೊರತುಪಡಿಸಿದಂತೆ ಭಾರತದ ಇತರ ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆನಡಾ ರಾಜತಾಂತ್ರಿಕರ ಪೈಕಿ ಬಹುತೇಕರನ್ನು ಸಿಂಗಪುರ ಇಲ್ಲವೇ ಕ್ವಾಲಾಲಂಪುರಕ್ಕೆ ಸ್ಥಳಾಂತರಿಸಲಾಗಿದೆ‘ ಎಂದು ಕೆನಡಾದ ಖಾಸಗಿ ಸುದ್ದಿವಾಹಿನಿ ಸಿಟಿವಿ ನ್ಯೂಸ್‌ ವರದಿ ಮಾಡಿದೆ. 

ಖಾಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರ್‌ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಪ್ರಧಾನಿ ಜಸ್ಟಿನ್ ಟ್ರೂಡೊ ಆರೋಪಿಸಿದ್ದರು. ಈ ಆರೋಪಗಳನ್ನು ಭಾರತ ತಳ್ಳಿಹಾಕಿತ್ತು. ನಂತರ, ಎರಡು ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಶುರುವಾಗಿದೆ.

ದೇಶದಲ್ಲಿರುವ ರಾಜತಾಂತ್ರಿಕರ ಸಂಖ್ಯೆಯನ್ನು 41ಕ್ಕೆ ಇಳಿಸಬೇಕು. ಈ ಹಿನ್ನೆಲೆಯಲ್ಲಿ ಅಕ್ಟೋಬರ್‌ 10 ರ ಒಳಗಾಗಿ ರಾಜತಾಂತ್ರಿಕರನ್ನು ವಾಪಸ್‌ ಕರೆಸಿಕೊಳ್ಳುವಂತೆ ಭಾರತ ಗಡುವು ನೀಡಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT