ಟಂಬ್ಲರ್ ರಿಡ್ಜ್ (ಕೆನಡಾ): ಕೆನಡಾದ ಟಂಬ್ಲರ್ ರಿಡ್ಜ್ ನಗರದಲ್ಲಿರುವ ‘ಟಂಬ್ಲರ್ ರಿಡ್ಜ್’ ಹೈಸ್ಕೂಲ್ನಲ್ಲಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಬುಧವಾರ ಹೆಚ್ಚಿನ ಮಾಹಿತಿ ಹಂಚಿಕೊಂಡಿದ್ದು, ‘18 ವರ್ಷ ವಯಸ್ಸಿನ ಲಿಂಗತ್ವ ಅಲ್ಪಸಂಖ್ಯಾತೆ ಈ ದಾಳಿ ನಡೆಸಿದ್ದು, ಅವರು ಮಾನಸಿಕ ಅಸ್ವಸ್ಥರು’ ಎಂದು ಹೇಳಿದ್ದಾರೆ.

‘ಜೆಸ್ಸಿ ವ್ಯಾನ್ ರೂಟ್ಸೆಲ್ಲಾ ಅವರು ಗುಂಡಿನ ದಾಳಿ ನಡೆಸಿದ್ದಾರೆ. ಲಿಂಗತ್ವ ಅಲ್ಪಸಂಖ್ಯಾತರಾಗಿರುವ ಇವರನ್ನು ನಾಲ್ಕು ವರ್ಷಗಳ ಹಿಂದೆ ಇದೇ ಟಂಬ್ಲರ್ ರಿಡ್ಜ್ ಹೈಸ್ಕೂಲ್ನಿಂದ ಹೊರಹಾಕಲಾಗಿತ್ತು. ದಾಳಿಯ ಹಿಂದಿನ ನಿಖರ ಕಾರಣ ತಿಳಿದುಬಂದಿಲ್ಲ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಜೆಸ್ಸಿ ಅವರು ಮೊದಲು ತಮ್ಮ ಮನೆಯಲ್ಲಿ ತಾಯಿ ಹಾಗೂ ಸಹೋದರನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಆ ಬಳಿಕ ಶಾಲೆಗೆ ತೆರಳಿ ಗುಂಡಿನ ದಾಳಿ ನಡೆಸಿದ್ದಾರೆ’ ಎಂದರು.

‘ಜೆಸ್ಸಿ ಅವರು ಮಾನಸಿಕ ಅಸ್ವಸ್ಥರು ಎಂಬುದು ಮೊದಲೇ ತಿಳಿದಿತ್ತು. ಅವರ ಮಾನಸಿಕ ಸ್ಥಿತಿಯ ಬಗ್ಗೆ ನಮಗೆ ಹಲವು ಕರೆಗಳು ಬಂದಿದ್ದವು. ಆದ್ದರಿಂದ ನಾವು ಈ ಹಿಂದೆ ಹಲವು ಬಾರಿ ಅವರ ಮನೆಗೂ ಹೋಗಿದ್ದೆವು. ಜೆಸ್ಸಿ ಅವರ ಆರೋಗ್ಯದ ಸರಿಯಾದ ಮಾಹಿತಿ ಪಡೆಯಲು ಆರೋಗ್ಯ ಇಲಾಖೆಯೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ’ ಎಂದರು.

‘ಒಂಬತ್ತಲ್ಲ, ಎಂಟು ಸಾವು’: ‘ದಾಳಿಯಲ್ಲಿ ಒಂಬತ್ತು ಸಾವು ಸಂಭವಿಸಿದೆ ಎಂದು ಹೇಳಲಾಗಿತ್ತು. ಆದರೆ, ಘಟನೆಯಲ್ಲಿ 8 ಮಂದಿ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಒಬ್ಬರ ಆರೋಗ್ಯದ ಕುರಿತು ಗೊಂದಲಗಳಿತ್ತು’ ಎಂದು ಪೊಲೀಸರು ಹೇಳಿದರು.

‘ದಾಳಿಯಲ್ಲಿ 39 ವರ್ಷದ ಶಿಕ್ಷಕಿ ಮೃತಪಟ್ಟಿದ್ದಾರೆ. ಜೊತೆಗೆ, ಐವರು ವಿದ್ಯಾರ್ಥಿಗಳು– ಈ ಪೈಕಿ 12 ವರ್ಷ ವಯಸ್ಸಿನ ಮೂವರು ವಿದ್ಯಾರ್ಥಿನಿಯರು ಮತ್ತು 13 ಹಾಗೂ 12 ವರ್ಷ ವಯಸ್ಸಿನ ಇಬ್ಬರು ವಿದ್ಯಾರ್ಥಿಗಳು ಸೇರಿದ್ದಾರೆ’ ಎಂದು ಪೊಲೀಸರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.