ಇಸ್ತಾಂಬುಲ್: ಗಾಜಾದಲ್ಲಿ ಕದನ ವಿರಾಮ ಘೋಷಿಸುವ ಕುರಿತಂತೆ ವಾರದ ವಿರಾಮದ ತರುವಾಯ ಹಮಾಸ್ನ ಬಂಡುಕೋರರು ಮತ್ತು ಇಸ್ರೇಲ್ ನಡುವೆ ಮಾತುಕತೆ ಆರಂಭವಾಗಿದೆ.

14 ತಿಂಗಳ ಅವಧಿಯ ಯುದ್ಧಕ್ಕೆ ಕದನ ವಿರಾಮವನ್ನು ಘೋಷಿಸಲು ಈ ಮಾತುಕತೆಯು ಸಹಕಾರಿ ಆಗಲಿದೆ ಎಂದು ಹಮಾಸ್ನ ಅಧಿಕಾರಿಯೊಬ್ಬರು ಆಶಿಸಿದ್ದಾರೆ.

‘ಮಾತುಕತೆಯಲ್ಲಿ ಪ್ರಗತಿ ಕಂಡುಬರುತ್ತಿಲ್ಲ ಎಂದು ಈಜಿಪ್ಟ್ ಮತ್ತು ಅಮೆರಿಕದ ಮಧ್ಯಸ್ಥಿಕೆದಾರರು ನಿರಾಸೆಗೊಂಡಿದ್ದರಿಂದ ಸಂಧಾನ ಚರ್ಚೆಯನ್ನು ಕೆಲಕಾಲ ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೆ ಚರ್ಚೆ ಆರಂಭಿಸಲಾಗಿದೆ’ ಹಮಾಸ್ ರಾಜಕೀಯ ಸಮಿತಿಯ ಅಧಿಕಾರಿ ಬಸೀಂ ನಯೀಂ ತಿಳಿಸಿದ್ದಾರೆ.

ಮಾತುಕತೆ ಪ್ರಕ್ರಿಯೆಯು ಸ್ಥಗಿತವಾದ ಬಳಿಕ ಜಾಗತಿಕವಾಗಿ ಹಲವು ಬದಲಾವಣೆಗಳು ಘಟಿಸಿವೆ. ಲೆಬನಾನ್ನಲ್ಲಿ ಇಸ್ರೇಲ್ ಮತ್ತು ಹಿಜ್ಬುಲ್ಲಾ ಬಂಡುಕೋರರ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಮರು ಆಯ್ಕೆಯಾಗಿದ್ದಾರೆ.

ಟ್ರಂಪ್ ಅವರು ಇಸ್ರೇಲ್ ಪರ ಬೆಂಬಲ ಹೊಂದಿದ್ದರೂ ‘ಒಟ್ಟು ಸ್ಥಿತಿಯನ್ನು ಸಕಾರಾತ್ಮಕ ದೃಷ್ಟಿಯಿಂದ ಅಮೆರಿಕದ ಮುಂದಿನ ಆಡಳಿತ ನೋಡಲಿದೆ’ ಎಂದು ಹಮಾಸ್ ಅಧಿಕಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಮಾಸ್ ಬಂಡುಕೋರರು ಅಕ್ಟೋಬರ್ 7, 2023ರಂದು ಇಸ್ರೇಲ್ನ ಮೇಲೆ ಅಪ್ರಚೋದಿತವಾಗಿ ದಾಳಿ ನಡೆಸಿದ್ದು, 1200 ಜನರು ಹತರಾಗಿದ್ದರು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಸೇನೆಯು ಗಾಜಾಪಟ್ಟಿ ಗುರಿಯಾಗಿಸಿ ನಿರಂತರ ದಾಳಿ ನಡೆಸುತ್ತಿದೆ. ಇದುವರೆಗೆ 44,500 ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.