ವಾಷಿಂಗ್ಟನ್ :ಭಾರತ–ಚೀನಾ ನಡುವಣ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತದ ಬೆನ್ನಿಗೆ ನಿಂತಿರುವ ಅಮೆರಿಕ, ಇಂತಹ ಸಂಘರ್ಷವನ್ನು ಜೀವಂತವಾಗಿಡಲು ಯಾವಾಗಲೂ ಪ್ರಚೋದನಕಾರಿ ಮತ್ತು ಉಪದ್ರವಕಾರಿ ವರ್ತನೆಯನ್ನು ಚೀನಾ ಮುಂದುವರಿಸಿರುತ್ತದೆ ಎಂದು ಹೇಳಿದೆ.

‘ಭಾರತದೊಂದಿಗಿನ ಚೀನಾದ ಗಡಿ ವಿವಾದ ಮತ್ತುದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಆಕ್ರಮಣಕಾರಿ ನಿಲುವಿಗೂ ಕೆಲವು ಸಾಮ್ಯತೆ ಇದೆ’ ಎಂದುದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳಿಗೆ ಸಂಬಂಧಿಸಿದ ಹಿರಿಯ ರಾಜತಾಂತ್ರಿಕ ಆಲೈಸ್ ಜಿ ವೆಲ್ಸ್ ತಿಳಿಸಿದ್ದಾರೆ.

‘ಚೀನಾ ತನ್ನ ಕಾರ್ಯಾಚರಣೆಗಳಿಗೆ ಒಂದು ನಿರ್ದಿಷ್ಟ ವಿಧಾನ ಅನುಸರಿಸುತ್ತದೆ. ಯಥಾಸ್ಥಿತಿಯನ್ನು ಮತ್ತು ನಿಯಮಗಳನ್ನು ಬದಲಿಸಲು ನಿರಂತರ ಪ್ರಯತ್ನ ನಡೆಸುತ್ತಲೇ ಇರುತ್ತದೆ. ಇದಕ್ಕೆ ಪ್ರತಿರೋಧ ಒಡ್ಡಬೇಕಿದೆ’ ಎಂದು ಅವರು ಅಟ್ಲಾಂಟಿಕ್ ಕೌನ್ಸಿಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

‘ಅಮೆರಿಕದ ಟೀಕೆ ಅಸಂಬದ್ಧ’

ಬೀಜಿಂಗ್: ಭಾರತ–ಚೀನಾದ ಗಡಿಯ ವಿಚಾರದಲ್ಲಿ ಅಮೆರಿಕದ ರಾಜತಾಂತ್ರಿಕರ ಟೀಕೆಗಳು ಅಸಂಬದ್ಧವಾಗಿವೆ ಎಂದು ಚೀನಾ ಗುರುವಾರ ಹೇಳಿದೆ.

‘ಭಾರತ–ಚೀನಾ ಗಡಿ ವಿಚಾರದಲ್ಲಿ ಚೀನಾದ ನಿಲುವು ಸ್ಥಿರ ಮತ್ತು ಸ್ಪಷ್ಟವಾಗಿದೆ’ ಎಂದುಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜಾಹೊ ಲಿಜಿಯಾನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.