ಬೀಜಿಂಗ್: ಅಮೆರಿಕ–ಇಸ್ರೇಲ್ ದಾಳಿ ನಡೆಸುವ ಮೊದಲು ಇರಾನ್ ಜೊತೆ ಸಿ.ಎಂ–302 ಸೂಪರ್ಸಾನಿಕ್ ನೌಕಾ ನಿಗ್ರಹ ಕ್ಷಿಪಣಿಗಳ ಮಾರಾಟ ಒಪ್ಪಂದವನ್ನು ಅಂತಿಮಗೊಳಿಸಲಾಗಿತ್ತು ಎಂಬ ವರದಿಗಳನ್ನು ಚೀನಾ ಸೋಮವಾರ ನಿರಾಕರಿಸಿದೆ.

‘ಈ ಕುರಿತ ವರದಿಗಳು ಸತ್ಯಾಂಶವನ್ನು ಹೊಂದಿಲ್ಲ. ಜವಾಬ್ದಾರಿಯುತ ದೇಶವಾದ ಚೀನಾ ಯಾವಾಗಲೂ ಅಂತರರಾಷ್ಟ್ರೀಯ ಬಾಧ್ಯತೆಗಳನ್ನು ಪಾಲಿಸುತ್ತದೆ. ದುರುದ್ದೇಶಪೂರಿತ ಸಹಭಾಗಿತ್ವ ಮತ್ತು ತಪ್ಪು ಮಾಹಿತಿ ಹಂಚಿಕೆಯನ್ನು ಚೀನಾ ವಿರೋಧಿಸುತ್ತದೆ. ಇದು ಸುಳ್ಳು ಮಾಹಿತಿಯನ್ನು ಹರಡುವ ಅಭಿಯಾನದ ಭಾಗವಾಗಿದೆ’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವ್ ನಿಂಗ್ ಅವರು ತಿಳಿಸಿದ್ದಾರೆ.

‘ಉದ್ವಿಗ್ನತೆಯನ್ನು ಶಮನಗೊಳಿಸಲು ಸಂಬಂಧಿಸಿದ ದೇಶಗಳು ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ಇದೆ’ ಎಂದು ಅವರು ಹೇಳಿದ್ದಾರೆ.

ಒಪ್ಪಂದದ ಕುರಿತ ಮಾಧ್ಯಮ ವರದಿಗಳು ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆ ಉಂಟಾಗಿರುವ ಕಾರಣಕ್ಕೆ ಮಹತ್ವ ಪಡೆದಿವೆ.

ಇರಾನ್ ಚೀನಾಕ್ಕೆ ಅತೀ ದೊಡ್ಡ ತೈಲ ಪೂರೈಕೆ ದೇಶವಾಗಿದೆ ಮತ್ತು ಚೀನಾದೊಂದಿಗೆ ರಕ್ಷಣಾ ಹಾಗೂ ಇತರ ವಲಯದ ಪಾಲುದಾರಿಕೆಯನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.