ಬೀಜಿಂಗ್:ಕೊರೊನಾ –2 ವೈರಸ್ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ವಿದೇಶಗಳಿಂದ ಬರುವ ಪ್ರಯಾಣಿಕರನ್ನು ಎರಡು ವಾರಗಳ ಕಾಲ ಪ್ರತ್ಯೇಕ ಸ್ಥಳದಲ್ಲಿರಿಸಲುಚೀನಾ ಆದೇಶ ಹೊರಡಿಸಿದೆ.

ದಕ್ಷಿಣ ಕೊರಿಯಾ, ಇರಾನ್, ಇಟಲಿ ಮತ್ತು ಜಪಾನ್ ದೇಶಗಳಿಂದ ಬರುವವರನ್ನು ಈಗಾಗಲೇ ಪ್ರತ್ಯೇಕ ಸ್ಥಳದಲ್ಲಿರಿಸಿ ನಿಗಾ ವಹಿಸಲಾಗುತ್ತಿದೆ. ಇತರೆ ದೇಶಗಳಿಂದ ಬರುವವರನ್ನು ಸಹ 14 ದಿನಗಳವರೆಗೆ ಪ್ರತ್ಯೇಕ ಸ್ಥಳದಲ್ಲಿರಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿರುವ ವುಹಾನ್ ನಗರಕ್ಕೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಮಂಗಳವಾರ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.ಸೋಂಕು ನಿಯಂತ್ರಿಸುವಲ್ಲಿ ಶ್ರಮಿಸುತ್ತಿರುವ ಅಧಿಕಾರಿಗಳು ಮತ್ತು ವೈದ್ಯಕೀಯ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿದ ಅವರು, ಪರಿಸ್ಥಿತಿ ಹತೊಟಿಗೆ ತರುವಲ್ಲಿ ಆರಂಭಿಕ ಯಶಸ್ಸು ದೊರೆತಿದೆ ಎಂದು ಹೇಳಿದ್ದಾರೆ.

* ಕೋವಿಡ್ –19 ಗೆ ಚೀನಾದಲ್ಲಿ ಮತ್ತೆ 22 ಸಾವು, ಈವರೆಗೆ ಒಟ್ಟು 3,158 ಮಂದಿ ಮೃತಪಟ್ಟಿದ್ದಾರೆ.

* ಚೀನಾದಲ್ಲಿ ಹೊಸದಾಗಿ 21 ಶಂಕಿತ ಪ್ರಕರಣಗಳು ಪತ್ತೆಯಾಗಿವೆ.

* ಶ್ರೀಲಂಕಾದಲ್ಲಿ ಕೊರೊನಾ–2 ಸೋಂಕು ತಗುಲಿರುವ ಮೊದಲ ಪ್ರಕರಣ ಪತ್ತೆ.

* ಅಮೆರಿಕದಲ್ಲಿ ಕೋವಿಡ್ –19ಗೆ ಬಲಿಯಾದವರ ಸಂಖ್ಯೆ 31ಕ್ಕೇರಿದೆ. 1000 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.