ಬೀಜಿಂಗ್: ಆಗ್ನೇಯ ಚೀನಾದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಸಂಬಂಧಿತ ಅವಘಡಗಳಲ್ಲಿ ಏಳು ಜನರು ಮೃತಪಟ್ಟಿದ್ದು, ಕನಿಷ್ಠ ಮೂವರು ನಾಪತ್ತೆಯಾಗಿದ್ದಾರೆ ಎಂದು ಮಾಧ್ಯಮ ವರದಿಯೊಂದು ಮಂಗಳವಾರ ತಿಳಿಸಿದೆ.

ಉಷ್ಣವಲಯದ ಚಂಡಮಾರುತದಿಂದ ಇದುವರೆಗೂ ಮೃತಪಟ್ಟವರ ಸಂಖ್ಯೆ 22ಕ್ಕೇರಿದೆ. ಮೃತಪಟ್ಟವರೆಲ್ಲರೂ ಹುನಾನ್ ಪ್ರಾಂತ್ಯದವರು.

ಜಿಕ್ಸಿಂಗ್ ನಗರದ ನಾಲ್ಕು ಹಳ್ಳಿಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಕಾಣೆಯಾಗಿದ್ದ ಮೂವರ ಮೃತದೇಹಗಳು ನಗರ ಸಮೀಪದ ಹಳ್ಳಿಯೊಂದರಲ್ಲಿ ಪತ್ತೆಯಾಗಿದ್ದು, ಮಣ್ಣು ಕುಸಿತದಿಂದ ಇವರು ಸಾವಿಗೀಡಾಗಿದ್ದಾರೆ.

ಮಳೆಯಿಂದ ನೂರಾರು ಮನೆಗಳಿಗೆ ಹಾನಿಯಾಗಿದೆ. 11 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.