ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಮರಣ ಶೇ 80ರಷ್ಟು ಇಳಿಕೆ: ಚೀನಾ

Last Updated 26 ಜನವರಿ 2023, 14:42 IST
ಅಕ್ಷರ ಗಾತ್ರ

ಬೀಜಿಂಗ್‌: ‘ದೇಶದಲ್ಲಿ ಪ್ರತಿದಿನ ವರದಿಯಾಗುತ್ತಿದ್ದ ಕೋವಿಡ್‌ ಮರಣ ಪ್ರಕರಣಗಳು ಈ ತಿಂಗಳ ಆರಂಭದಿಂದ ಸುಮಾರು ಶೇ 80ರಷ್ಟು ಇಳಿಕೆಯಾಗಿವೆ’ ಎಂದು ಚೀನಾದ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ಹೋದ ತಿಂಗಳು ಚೀನಾವು ಶೂನ್ಯ ಕೋವಿಡ್‌ ನೀತಿ ಹಿಂಪಡೆದಿತ್ತು. ಬಳಿಕ ಕೋವಿಡ್‌ ಸೋಂಕಿತರು ಹಾಗೂ ಮರಣ ಪ್ರಕರಣದಲ್ಲಿ ದಿಢೀರ್‌ ಏರಿಕೆ ಕಂಡುಬಂದಿತ್ತು.

‘ಜನವರಿ 13 ರಿಂದ 19ರ ಅವಧಿಯಲ್ಲಿ ಕೋವಿಡ್‌ ಸಂಬಂಧಿತ ಕಾಯಿಲೆಗಳಿಂದಾಗಿ ಸುಮಾರು 13 ಸಾವಿರ ಮಂದಿ ಮೃತಪಟ್ಟಿದ್ದಾರೆ’ ಎಂದು ಸೆಂಟರ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಆ್ಯಂಡ್‌ ಪ್ರಿವೆನ್ಷನ್‌ (ಸಿ.ಡಿ.ಸಿ) ಕಳೆದ ವಾರ ತಿಳಿಸಿತ್ತು. ಕೋವಿಡ್‌ ಸಂಬಂಧಿತ ಕಾಯಿಲೆಗಳಿಂದಾಗಿ ದೇಶದಲ್ಲಿ ಒಂದೇ ತಿಂಗಳಲ್ಲಿ ಸುಮಾರು 60 ಸಾವಿರ ಮಂದಿ ಸಾವಿಗೀಡಾಗಿದ್ದಾರೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗವು (ಎನ್‌ಎಚ್‌ಸಿ) ಈ ಮೊದಲು ಮಾಹಿತಿ ನೀಡಿತ್ತು.

‘ಕೋವಿಡ್‌ನಿಂದಾಗಿ ಸೋಮವಾರ 896 ಮಂದಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಗಂಭೀರ ಪ್ರಕರಣಗಳ ಸಂಖ್ಯೆಯೂ 36 ಸಾವಿರಕ್ಕೆ ತಗ್ಗಿದೆ. ಜನವರಿ 4ರಿಂದ ಈಚೆಗೆ ಮರಣ ಪ್ರಕರಣವು ಶೇ 79ರಷ್ಟು ಕಡಿಮೆಯಾಗಿದೆ’ ಎಂದು ಸಿ.ಡಿ.ಸಿ ಬುಧವಾರ ಹೊರಡಿಸಿರುವ ಪ್ರಕಟಣೆಯಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT