ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ಹಮಾಸ್, ಫತಾ ಸಭೆ

Published 30 ಏಪ್ರಿಲ್ 2024, 12:36 IST
Last Updated 30 ಏಪ್ರಿಲ್ 2024, 12:36 IST
ಅಕ್ಷರ ಗಾತ್ರ

ಬೀಜಿಂಗ್: ಪ್ಯಾಲೆಸ್ಟೀನ್‌ನ ವಿರೋಧಿ ಗುಂಪುಗಳಾದ ಹಮಾಸ್ ಮತ್ತು ಫತಾ ಪ್ರತಿನಿಧಿಗಳು ಬೀಜಿಂಗ್‌ನಲ್ಲಿ ಈಚೆಗೆ ಸಭೆ ಸೇರಿ, ‘ಪ್ಯಾಲೆಸ್ಟೀನ್‌ನ ಒಳಗೆ ಹೊಂದಾಣಿಕೆಯನ್ನು ಹೆಚ್ಚಿಸುವ ಅಗತ್ಯಗಳ ಬಗ್ಗೆ ಪ್ರಾಮಾಣಿಕವಾಗಿ ಮಾತುಕತೆ ನಡೆಸಿದ್ದಾರೆ’ ಎಂದು ಚೀನಾ ಹೇಳಿದೆ.

‘ಪ್ಯಾಲೆಸ್ಟೀನ್ ನ್ಯಾಷನಲ್ ಲಿಬರೇಷನ್ ಮೂಮೆಂಟ್ ಮತ್ತು ಇಸ್ಲಾಮಿಕ್‌ ರೆಸಿಸ್ಟೆನ್ಸ್ ಮೂಮೆಂಟ್‌ನ ಪ್ರತಿನಿಧಿಗಳು ಈಚೆಗೆ ಬೀಜಿಂಗ್‌ಗೆ ಬಂದಿದ್ದರು. ಎರಡೂ ಕಡೆಯವರು ಮಾತುಕತೆ ಮೂಲಕ ಹೊಂದಾಣಿಕೆಗಳನ್ನು ಮಾಡಿಕೊಳ್ಳಲು ಒಲವು ಇರುವುದಾಗಿ ತಿಳಿಸಿದರು, ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದು ಸಕಾರಾತ್ಮಕ ಪ್ರಗತಿ ಸಾಧಿಸಿದರು’ ಎಂದು ಚೀನಾ ವಿದೇಶಾಂಗ ವ್ಯವಹಾರಗಳ ವಕ್ತಾರ ಲಿನ್ ಜಿಯಾನ್ ಹೇಳಿದ್ದಾರೆ. ಸಭೆಯು ಯಾವಾಗ ನಡೆದಿದೆ ಎಂಬುದನ್ನು ಅವರು ತಿಳಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT