ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ಕೊರೊನಾ ವೈರಸ್‌: ಸಾವಿನ ಸಂಖ್ಯೆ 25ಕ್ಕೆ ಏರಿಕೆ, 830 ಜನರಿಗೆ ಸೋಂಕು

Last Updated 24 ಜನವರಿ 2020, 2:19 IST
ಅಕ್ಷರ ಗಾತ್ರ

ಬೀಜಿಂಗ್‌: ಗಂಭೀರ ಸ್ವರೂಪದ ಕೊರೊನಾ ವೈರಸ್‌ ಸೋಂಕು ಸಾಕಷ್ಟು ವ್ಯಾಪಿಸುತ್ತಿದ್ದು, ಇದುವರೆಗೂ 25 ಮಂದಿ ಬಲಿಯಾಗಿದ್ದಾರೆ. 830 ಮಂದಿಗೆ ಸೋಂಕು ತಗುಲಿದೆ.

ಮೊದಲು ವೈರಸ್‌ ಕಾಣಿಸಿಕೊಂಡ ವುಹಾನ್‌ ನಗರದಲ್ಲಿ ಶಂಕಿತ 1,072 ರೋಗಿಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ ಅಧಿಕಾರಿಗಳು ತಿಳಿಸಿದರು.

ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸುವುದನ್ನು ನಿಲ್ಲಿಸಿದ ಕೆಲವೇ ಗಂಟೆಗಳ ಈ ನಂತರ ಈ ವೈರಸ್‌ಗೆ ಬಲಿಯಾದವರ ಸಂಖ್ಯೆ ಏರಿಕೆಯಾಗಿದ್ದನ್ನು ಪ್ರಕಟಿಸಲಾಯಿತು.

ಎರಡು ನಗರಗಳಲ್ಲಿ ಒಟ್ಟು ಜನಸಂಖ್ಯೆ ಸುಮಾರು 2 ಕೋಟಿ. ವುಹಾನ್‌ ಮತ್ತು ಹುವಾನ್‌ಗಾಂಗ್‌ ನಗರಗಳಿಂದ ವಿಮಾನ, ರೈಲು ಸಂಚಾರದ ಮೇಲೆ ನಿರ್ಬಂಧ ಹೇರಲಾಗಿದೆ.

ವುಹಾನ್‌ನ ಜನಸಂಖ್ಯೆ ಸುಮಾರು 1.10 ಕೋಟಿ ಇದ್ದರೆ, ಹುವಾನ್‌ಗಾಂಗ್‌ನ ಜನಸಂಖ್ಯೆ ಸುಮಾರು 80 ಲಕ್ಷ. ಜನರು ‘ವಿಶೇಷ ಕಾರಣಗಳಿಲ್ಲದೇ’ ನಿರ್ಗಮಿಸಬಾರದು ಎಂದು ಸೂಚಿಸಲಾಗಿದೆ. ಅಲ್ಲದೆ, ವಾಣಿಜ್ಯ ಚಟುವಟಿಕೆಗಳೂ ಕುಗ್ಗಿವೆ. ಸಿನಿಮಾ ಮಂದಿರ, ಇಂಟರ್‌ನೆಟ್‌ಕೆಫೆಗಳು ಬಂದ್ ಆಗಿವೆ.

ಎಜೌ ನಗರದಲ್ಲಿಯೂ ಮುಂಜಾಗ್ರತೆಯಾಗಿ ರೈಲು ಸಂಚಾರವನ್ನು ನಿರ್ಬಂಧಿಸಲಾಗಿದೆ. ‘ವಿಶ್ವವೇ ಅಂತ್ಯವಾದ ಭಾವನೆ ನಮ್ಮನ್ನು ಕಾಡುತ್ತಿದೆ’ ಎಂದು ವುಹಾನ್‌ ನಿವಾಸಿಯೊಬ್ಬರು ವಿಬೊ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

ಇನ್ನೊಂದೆಡೆ, ಬೀಜಿಂಗ್‌ನಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಒಂದು ಕಡೆ ಗುಂಪುಗೂಡುವುದನ್ನು ನಿರ್ಬಂಧಿಸಿ ಸ್ಥಳೀಯ ಸರ್ಕಾರ ಆದೇಶ ಹೊರಡಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT